
ಪ್ರಗತಿವಾಹಿನಿ ಸುದ್ದಿ; ದಾಂಡೇಲಿ: ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ, ಹಳಿಯಾಳದ ಬಿಜೆಪಿ ಧುರೀಣ ರಾಜು ಧೂಳಿ ನಿಧನರಾಗಿದ್ದಾರೆ.
ರಾಜು ಧೂಳಿ ಕಳೆದ ಮೂರು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದವರು. ಒಮ್ಮೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ವಿಧಾನಸಭೆ ಚುನಾವಣೆಗೆ ಕೂಡ ಸ್ಪರ್ಧಿಸಿದ್ದರು.
ರಾಮಮಂದಿರ ಹೋರಾಟ, ಭಾರತೀಯ ಜನತಾ ಪಕ್ಷದ ಸಂಘಟನೆ ಕಾರ್ಯಗಳು, ನವರಾತ್ರಿ ಹಬ್ಬದ ದುರ್ಗಾ ದೌಡ ಧಾರ್ಮಿಕ ಪಾದಯಾತ್ರೆ ಸಂಘಟಿಸಿದವರು. ಸಕ್ಕರೆ ಕಾರ್ಖಾನೆ ಗಾಗಿ ಪಾದಯಾತ್ರೆ ಮಾಡಿದ್ದರು. ಹಳಿಯಾಳ ಕೇಂದ್ರಸ್ಥಾನವಾಗಿ ಉಳವಿ ಜಿಲ್ಲೆಯ ರಚನೆಗೆ ಹೋರಾಟ ಹಮ್ಮಿಕೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ