ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಅಧಿಕೃತವಾಗಿ ಬಂಡಾಯದ ಭಾವುಟ ಹಾರಿಸಿದ್ದಾರೆ. ನನಗೆ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ಟಿಕೆಟ್ ನೀಡುವ ಪಕ್ಷಕ್ಕೆ ಹೋಗಲು ಸಿದ್ದನಿದ್ದೇನೆ. ಇಲ್ಲವಾದಲ್ಲಿ ಸ್ವತಂತ್ರವಾಗಿಯಾದರೂ ಸ್ಪರಿಧಿಸುವುದು ಖಚಿತ ಎಂದಿದ್ದಾರೆ.
ನಾನು ಮಠದ ಸ್ವಾಮಿಯಲ್ಲ, ಸನ್ಯಾಸಿಯಲ್ಲ. ಇಂದೇ ಬೆಂಗಳೂರಿಗೆ ತೆರಳಿ ಬಿಜೆಪಿ ನಾಯಕರೊಂದಿಗೆ ಮಾತನಾಡುತ್ತೇನೆ. ನನಗಾಗಿರುವ ಅನ್ಯಾಯ ಸರಿಪಡಿಸದಿದ್ದಲ್ಲಿ ನ್ಯಾಯ ಸಿಗುವ ಕಡೆಗೆ ಹೋಗುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ಇರುತ್ತದೆ. ನನಗೆ ಬಿಜೆಪಿಯಲ್ಲಿ ಅನ್ಯಾಯ ಆಗಿದ್ದು ನಿಜ. ಅದನ್ನು ಸರಿಪಡಿಸುವ ಭರವಸೆ ಸಿಕ್ಕಿದರೆ ಸರಿ, ಇಲ್ಲವಾದಲ್ಲಿ ಅನ್ಯಾಯ ಮಂದುವರಿದರೆ ಬೇರೆ ನಿರ್ಧಾರ ಮಾಡಿಯೇ ಮಾಡುತ್ತೇನೆ. ಈ ಬಾರಿ ಗೆಲ್ಲುವ ಕುದುರೆ ರಾಜು ಕಾಗೆ ಎಂದು ಕಾಂಗ್ರೆಸ್ ನವರೂ ಹಳುತ್ತಿದ್ದಾರೆ. ಹಾಗಾಗಿ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕರ್ತ ಬೃಹತ್ ಸಭೆ ನಡೆಸಿದ ಅವರು, ಶ್ರೀಮಂತ ಪಾಟೀಲ ಎಂದೂ ಬಿಜೆಪಿಗೆ ಸಹಾಯ ಮಾಡಿಲ್ಲ. ಅವರು ಈ ಹಿಂದೆ ಬಿಜೆಪಿ ಕಳ್ಳರ ಪಕ್ಷ ಎಂದಿದ್ದರು. ಬಿಜೆಪಿ ಬಗ್ಗೆ ಏನೆಲ್ಲ ಬೈದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಅಥವಾ ಅವರ ಮಗನಿಗೆ ಟಿಕೆಟ್ ಕೊಟ್ಟರೆ ಬಿಜೆಪಿ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎಂದು ಹೇಳಿದರು.
ಕಾಗವಾಡದಲ್ಲಿ ಬಿಜೆಪಿಗೆ ಕಾಗೆ ಕಂಟಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ