*ಅನುದಾನಕ್ಕೆ ಗಟ್ಟಿ ಭರವಸೆ ಕೊಟ್ಟವರಿಗೆ ಮೊದಲ ಪ್ರಾಶಸ್ತ್ಯದ ಮತ; ಕುತೂಹಲ ಮೂಡಿಸಿದ ಎಸ್.ಟಿ.ಸೋಮಶೇಖರ್ ನಡೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಚುರುಕುಗೊಂಡಿದೆ. ಈ ನಡುವೆ ಬಿಜೆಪಿ ಶಾಸಕ ಎಸ್.ಟಿ.ಸೋಮೋಶೇಖರ್ ನಡೆ ತೀವ್ರ ಕುತೂಹಲ ಮೂಡಿಸಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಕೊಟ್ಟವರಿಗೆ ನನ್ನ ಮತ. ಯಾರು ಅನುದಾನ ನೀಡುವುದಾಗಿ ಭರವಸೆ ಕೊಡುತ್ತಾರೋ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ. ಆ ನಿಟ್ಟಿನಲ್ಲಿ ಅನುದಾನ ನೀಡುವುದಾಗಿ ಯಾರು ಹೇಳುತ್ತಾರೆ ಅವರಿಗೆ ಮತ ಹಾಕುತ್ತೇನೆ. ಏನಾದ್ರೂ ಆಗಲಿ ಆತ್ಮಸಾಕ್ಷಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ.
ಕಳೆದ 6 ವರ್ಷಗಳಿಂದ ನೋಡುತ್ತ ಇದ್ದೇನೆ. ಎಲ್ಲರೂ ಅನುದಾನ ಕೊಡುತ್ತೇವೆ ಎಂದು ಬಾಯಿ ಮತಲ್ಲಿ ಹೇಳುತ್ತಾರೆ ಹೊರತು ಈವರೆಗೆ ಬಿಡಿಗಾಸು ನೀಡಿಲ್ಲ. ಹಾಗಾಗಿ ಈ ಬಾರಿ ಬಿಜೆಪಿಯವರಾಗಲಿ, ಕಾಂಗ್ರೆಸ್ ನವರಾಗಲಿ, ಜೆಡಿಎಸ್ ಆಗಲಿ ನನಗೆ ಬೇಧಭಾವವಿಲ್ಲ ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡುವುದಾಗಿ ಗಟ್ಟಿ ಭರವಸೆ ಕೊಡುತ್ತಾರೋ ಅವರಿಗೆ ನನ್ನ ವೋಟ್ ಇರಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ