ಸಚಿವೆ ಜೊಲ್ಲೆ ಪರ ಪ್ರಚಾರಕ್ಕಾಗಿ ನಿಪ್ಪಾಣಿಯ ಕೆಲಭಾಗದಲ್ಲಿ ರ್ಯಾಲಿ: ಮಹಾರಾಷ್ಟ್ರದ ಸಂಸದ ಧನಂಜಯ ಮಹಾಡಿಕ ಭಾಗಿ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಸ್ಥಳೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಪ್ರಚಾರಕ್ಕಾಗಿ ನಗರದ ವಿವಿಧೆಡೆ ಗುರುವಾರ ರ್ಯಾಲಿ ತೆಗೆಯಲಾಯಿತು. ಕೊಲ್ಹಾಪೂರದ ಸಂಸದ ಧನಂಜಯ ಮಹಾಡಿಕ ರ್ಯಾಲಿಯಲ್ಲಿ ಪಾಲ್ಗೊಂಡು ಸಚಿವೆ ಜೊಲ್ಲೆ ಪರ ಪ್ರಚಾರ ಮಾಡಿದರು.
ನಗರದ ಮೇಸ್ತ್ರಿಗಲ್ಲಿ, ಚವಾನವಾಡಿ, ಖರಾಡೆಗಲ್ಲಿ, ದರ್ಗಾಗಲ್ಲಿ, ನಾಗೊಬಾಗಲ್ಲಿ, ಭಾಟಗಲ್ಲಿ, ಭಿಸೆಗಲ್ಲಿ, ಕಾಮಗಾರ ಚೌಕ್, ಘಿಸಾಡಗಲ್ಲಿ, ಛತ್ರಪತಿ ಶಿವಾಜಿ ಮಹಾರಾಜ ಚೌಕ್, ಪಾವಲೆಗಲ್ಲಿಯಲ್ಲಿ ರ್ಯಾಲಿ ಸಾಗಿತು. ರ್ಯಾಲಿಯ ಮೂಲಕ ಸಚಿವೆ ಜೊಲ್ಲೆಯವರಿಗೆ ಹಾಗೂ ಪಕ್ಷದ ಜೈಕಾರದ ಘೋಷಣೆಗಳ ನಿನಾದ ಇಡಿ ನಗರದಲ್ಲಿ ಮೊಳಗಿದವು.
ರ್ಯಾಲಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸದಸ್ಯ ರಾಜೇಂದ್ರ ಗುಂದೇಶಾ, ಮಾಜಿ ಸದಸ್ಯ ರಾಜ ಪಠಾಣ, ದೀಪಕ ಮಾನೆ, ಹಾಲಶುಗರ್ ಸಂಚಾಲಕ ಅಮಿತ ರಣದಿವೆ, ಬಿಜೆಪಿ ಸ್ಥಳೀಯ ನಗರ ಘಟಕದ ಅಧ್ಯಕ್ಷ ಪ್ರಣವ ಮಾನವಿ, ಶೇಗುಲ್ಖಾನ ಪಠಾಣ, ದಿಲೀಪ ಚವಾಣ, ವಿದ್ಯಾ ರಣದಿವೆ, ಸುಜಾತಾ ಪಾರಳೆ, ವೈಶಾಲಿ ಪೋಟಳೆ, ಜ್ಯೋತಿ ಕಾಂಬಳೆ, ಅಲ್ಕಾ ನರಕೆ, ಗೀತಾ ಪಾರಳೆ, ರಮೇಶ ವೈದ್ಯ, ಸುಭಾಷ ಕದಮ, ವಿಕಾಸ ವಾಸುದೇವ, ಜಮೀರ ಪಠಾಣ, ಸಂದೀಪ ವಾಡಕರ, ಮಾರುತಿ ಭಿಸೆ, ಸಂಜಯ ಚಿಕ್ಕೋಡೆ, ಮೊದಲಾದವರು ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ