ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚೆನ್ನಮ್ಮ ನಗರದ ನಿವಾಸಿ ಹಿರಿಯ ವಕೀಲರು ರಾಮ ಮಹಾದೇವ್ ಆಪ್ಟೆ (96) ಇಂದು ತಮ್ಮ ನಿವಾಸದಲ್ಲಿ ನಿಧನರಾದರು.
‘ಪರೋಪಕಾರಾರ್ಥಾಯಮಿದಂ ಶರೀರಂ’ ಎಂಬಂತೆ ಅವರ ಅಂತಿಮ ಇಚ್ಛೆಯಂತೆ ಅವರ ಮೃತದೇಹವನ್ನು ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಡಾ.ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಮುಖಾಂತರ ಬೆಳಗಾವಿಯ ಕೆ.ಎಲ್.ಇ. ವಿಶ್ವವಿದ್ಯಾಲಯದ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಹಾಗೂ ಚರ್ಮವನ್ನು ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಕೆಎಲ್‌ಇ ರೋಟರಿ ಸ್ಕೀನ್ ಬ್ಯಾಂಕ್ (ಚರ್ಮ ಬಂಡಾರ)ಕ್ಕೆ ಚರ್ಮದಾನ ಮಾಡಿ ಸುಟ್ಟಗಾಯದಿಂದ ಬಳಲುತ್ತಿರುವ ರೋಗಿಗಳಿಗೆ ಶೀಘ್ರ ಗುಣಮುಖವಾಗಲು ಸಹಕರಿಸಿದ್ದಾರೆ.
ಪ್ರಾಂಶುಪಾಲ ಡಾ. ಎನ್.ಎಸ್. ಮಹಾಂತಶೆಟ್ಟಿ ಹಾಗೂ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ.ಶಿಲ್ಪಾ ಶರೀರ ರಚನಾ ವಿಭಾಗಕ್ಕೆ ಗೌರವಪೂರ್ವಕವಾಗಿ ದೇಹವನ್ನು ಸ್ವೀಕರಿಸಿದರು. ಡಾ.ರಾಜೇಶ ಪವಾರ,ಸಾಮಾಜಿಕಸೇವಕ ವಿಜಯ ಮೋರೆ, ಅಲೆನ್‌ಮೋರೆ, ಸಂತೋಷ್ ಮಮದಾಪುರ,ಡಾ.ರಾಮಣ್ಣವರ ಟ್ರಸ್ಟಿನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಅವರು ಆಪ್ಟೆ ಕುಟುಂಬದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಮ್ ಆಪ್ಟೆ ಅವರು ಪುತ್ರ ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.
ದೇಹದಾನದ ಹೆಚ್ಚಿನ ಮಾಹಿತಿಗಾಗಿ : ಡಾ. ರಾಮಣ್ಣವರ ಪ್ರತಿಷ್ಠಾನ ಮೊ : 9246496492 ನ್ನು ಸಂಪರ್ಕಿಸಬಹುದು.
*COVID Alert: ತುರ್ತು ಸಭೆ ಕರೆದ ಸಚಿವ ಆರ್.ಅಶೋಕ್; ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್?*
https://pragati.taskdun.com/covidemergency-meetingr-ashokvidhanasoudha/
ಹರಿವರಾಸನಂ ಶತಮಾನೋತ್ಸವ, ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ
https://pragati.taskdun.com/harivarasanam-centenary-sri-ayyappa-swami-mahapuja/
ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರಕ್ಕೆ ಮರಾಠಾ ಸಮಾಜ ಖಂಡನೆ
https://pragati.taskdun.com/maratha-society-condemns-conspiracy-against-mla-satish-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ