Kannada NewsKarnataka NewsLatest

ರಾಣಿ ಚನ್ನಮ್ಮ ವಿವಿ ಕುಲಪತಿಗಳಾಗಿ ರಾಮಚಂದ್ರ ಗೌಡ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಡಾ.ಎಂ.ರಾಮಚಂದ್ರಗೌಡ ನೇಮಕವಾಗಿದ್ದಾರೆ.

ರಾಜ್ಯಪಾಲ ವಜುಬಾಯಿ ವಾಲಾ ಈ ನೇಮಕ ಮಾಡಿದ್ದಾರೆ. ರಾಮಚಂದ್ರಗೌಡ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು. 

Home add -Advt

61 ವರ್ಷ ವಯಸ್ಸಿನ ರಾಮಚಂದ್ರ ಗೌಡ 4 ವರ್ಷಗಳ ಅವಧಿಗೆ ಆರ್ ಸಿಯು ವಿಸಿಯಾಗಿ ಕೆಲಸ ಮಾಡಲಿದ್ದಾರೆ.

ಡಾ.ಶಿವಾನಂದ ಹೊಸಮನಿ ನಿವೃತ್ತರಾದ ಹಿನ್ನೆಲೆಯಲ್ಲಿ ರಾಮಚಂದ್ರಗೌಡ ನೇಮಕವಾಗಿದೆ. 

ಕುಲಪತಿ ಹುದ್ದೆಗೆ ಸುಮಾರು 70 ಜನ ಆಕಾಂಕ್ಷಿಗಳಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button