ಪ್ರಗತಿವಾಹಿನಿ ಸುದ್ದಿ; ರಾಮನಗರ: ಸ್ಯಾಂಡಲ್ ವುಡ್ ಚಿತ್ರವೊಂದರ ಚಿತ್ರೀಕರಣ ವೇಳೆ ಮತ್ತೊಂದು ದುರಂತ ಸಂಭವಿಸಿದೆ. ರಾಮನಗರದಲ್ಲಿ ಸಿನಿಮಾ ಶೂಟಿಂಗ್ ವೇಳೆ ಫೈಟ್ ಮಾಸ್ಟರ್ ಓರ್ವ ಸಾವನ್ನಪ್ಪಿದ್ದಾರೆ.
ರಾಮನಗರದ ಜೋಗನಗುಡ್ಡದ ಬಳಿ ಲವ್ ಯೂ ರಚ್ಚು ಚಿತ್ರಿಕರಣದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ. ಮೃತ ವಿವೇಕ್ ತಮಿಳುನಾಡು ಮೂಲದವರಾಗಿದ್ದು, ಚಿತ್ರೀಕರಣದ ವೇಳೆ 11 KV ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಲವ್ ಯೂ ರಚ್ಚು ಚಿತ್ರ ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ಚಿತ್ರವಾಗಿದೆ.
ಯುವತಿ ಟೈಟ್ ಬಟ್ಟೆ ಧರಿಸಿದ್ದಕ್ಕೆ ಗುಂಡಿಟ್ಟು ಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ