
ಪ್ರಗತಿವಾಹಿನಿ ಸುದ್ದಿ; ಬಾಳೆಹೊನ್ನೂರು: ಬಾಳೆಹೊನ್ನೂರು ರಂಭಾಪುರಿ ಮಹಾ ಪೀಠದಲ್ಲಿ ಶ್ರೀ ಜಗದ್ಗುರು ಡಾಕ್ಟರ್ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಖ್ಯಾತ ವಾಸ್ತುತಜ್ಞ ಶ್ರೀಧರ್ ಪರಿಮಳಾಚಾರ್ಯ ಬಳ್ಳಾರಿ ಇವರಿಗೆ 60 ವರ್ಷ ಪೂರ್ಣಗೊಂಡ ಪ್ರಯುಕ್ತ ಶ್ರೀ ರಂಭಾಪುರಿ ಮಹಾ ಪೀಠದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಿ ವರದ ಹಸ್ತ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಜಗದ್ಗುರುಗಳವರು ಶ್ರೀಧರ್ ಪರಿಮಳಾಚಾರ್ಯ ಅವರು ಸುಮಾರು 25-30 ವರ್ಷ ಗಳಿಂದ ಪಂಚಪೀಠಗಳ ಅಭಿವೃದ್ಧಿಗೆ ವಾಸ್ತು ಸಲಹೆ ನೀಡಿ ಅಭಿವೃದ್ಧಿ ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಅಷ್ಟೇ ಅಲ್ಲದೆ ಅನೇಕ ಸಂಪ್ರದಾಯದ ಮಠಗಳನ್ನು ಮತ್ತು ಸಾಮಾನ್ಯ ಜನರಿಂದ ಉನ್ನತ ಸ್ಥಾನದಲ್ಲಿರುವ ಜನರಿಗೂ ಕೂಡ ವಾಸ್ತು ಸಲಹೆ ನೀಡಿದ್ದಾರೆ ಪಂಚ ಪೀಠದ ಪರಂಪರೆಯನ್ನು ಬೆಳಗಾವಿ ಹುಕ್ಕೇರಿ ಹಿರೇಮಠವನ್ನು ಮೊದಲು ಮಾಡಿಕೊಂಡು ನೂರಾರು ಮಠಗಳಿಗೆ ಮಾರ್ಗದರ್ಶನ ಮಾಡಿದ್ದಾರೆ ಇವತ್ತು ಸಂಸತ ಭವನಕು ವಾಸ್ತು ವಿನ್ಯಾಸವನ್ನು ಬದಲಿಸಿ ಏಕೆಂದರೆ ಸಂಸತ ಭವನದಲ್ಲಿಯು ಕೂಡ ವಾಸ್ತು ಅಷ್ಟರಮಟ್ಟಿಗೆ ಸರಿಯಿಲ್ಲಾ ಎಂದು ಮಾರ್ಗದರ್ಶನ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇಂತಹ ಅಪರೂಪದ ವ್ಯಕ್ತಿಗೆ 60 ವರ್ಷ ತುಂಬಿರುವುದು ಅಭಿಮಾನದ ಸಂಗತಿ ಎಂದರು.
ಅಹಂಕಾರವೇ ಇಲ್ಲದೆ ಇರುವ ಶ್ರೀಧರ ಪರಿಮಳಾಚಾರ್ಯರು ಯಾವತ್ತೂ ಕೂಡ ಪ್ರತಿಷ್ಠೆಯ ಬೆನ್ನು ಹತ್ತಿದವರಲ್ಲ ಇವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಶತಾಯುಷಿಗಳು ಆಗುವಂತೆ ಆಶೀರ್ವದಿಸಲಿ ನಮಗೆ ಹೆಮ್ಮೆ ಇದೆ ರಂಭಾಪುರಿ ಪೀಠದ ಅಭಿವೃದ್ಧಿಯಲ್ಲಿಯು ಕೂಡ ಇವರ ವಾಸ್ತು ಸಲಹೆ ಇದೆ ಎಂದು ಅಭಿಮಾನದಿಂದ ಹೇಳಲು ಇಚ್ಚಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಆಶೀರ್ವಾದವನ್ನು ಸ್ವೀಕರಿಸಿ ಮಾತನಾಡಿದ ಶ್ರೀಧರ ಪರಿಮಳಾಚಾರ್ಯ ಅವರು ವಾಸ್ತು ಇದು ವೈಜ್ಞಾನಿಕವಾಗಿರುವಂತದ್ದು ವಾಸ್ತು ಸರಿಯಾದರೆ ಮನುಷ್ಯ ಸರಿಯಾಗುತ್ತಾನೇ ನಾವು ಕುಳಿತ ಸ್ಥಾನ ಚೆನ್ನಾಗಿರಬೇಕು ಆಗಮಾತ್ರ ಎಲ್ಲವನ್ನೂ ಮಾಡಬಹುದು ರಂಭಾಪುರಿ ಜಗದ್ಗುರುಗಳು ಶ್ರೀ ಪೀಠದಲ್ಲಿ ನನಗೆ ಆಶೀರ್ವದಿಸಿದ್ದಾರೆ ಅವರ ವರದಹಸ್ತ ನಮ್ಮ ಮೇಲೆ ಸದಾ ಇರಲಿ ಅವರ ಆಶೀರ್ವಾದ ನಿರಂತರವಾಗಿ ಹೀಗೆ ಇರಲಿ ಎಂದು ಬಯಸುತ್ತೇವೇ ಈ ಸಂದರ್ಭದಲ್ಲಿ ಅಖಿಲಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿ ಮಂದಿರದ ವಿಮಲ ರೇಣುಕ ಶಿವಾಚಾರ್ಯ ಸ್ವಾಮಿಗಳವರು ಮತ್ತು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಎಮೈಗನುರಿನ ಡಾಕ್ಟರ್ ವಾಮದೇವ ಶಿವಾಚಾರ್ಯ ಸ್ವಾಮಿಗಳವರು ಶಿವಗಂಗೆಯ ಶ್ರೀ ಷ ಬ್ರ ಡಾಕ್ಟರ್ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳವರು ಮಹಾರಾಷ್ಟ್ರದ ನಾಗಣಸೂರು ಮಟ್ಟದ ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳವರು ಸೇರಿದಂತೆ ಸುಮಾರು 50 ಜನ ಶಿವಾಚಾರ್ಯರು ಉಪಸ್ಥಿತರಿದ್ದು ಶ್ರೀಯುತರಿಗೆ ಶುಭಾಶಯ ಕೋರಿದರು ಬೆಂಗಳೂರು ವಿಭೂತಿಪುರ ಮಠದ ಡಾಕ್ಟರ್ ಮಹಾಂತಲಿಂಗ ಸ್ವಾಮಿಗಳವರು ವಾಸ್ತವಿಕವಾಗಿ ಶ್ರೀಧರ್ ಪರಿಮಳಾಚಾರ್ಯ ರನ್ನು ಕುರಿತು ಮಾತನಾಡಿದರು