Latest

ಇನ್ನೂ 10 ಸಿಡಿ ಬರಲಿ; ಎದುರಿಸಲು ಸಿದ್ಧನಿದ್ದೇನೆ ಎಂದ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನನ್ನ ವಿರುದ್ಧ ಷಡ್ಯಂತ್ರ ನಡೆದಿರುವುದಂತು ಸ್ಪಷ್ಟ. ಸಾಕಷ್ಟು ಪ್ಲಾನ್ ಮಾಡಿ ನನ್ನನ್ನು ಸಿಲುಕಿಸುವ ತಂತ್ರ ಮಾಡಿದ್ದಾರೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಿಡಿ ಲೇಡಿ ಮತ್ತೊಂದು ಸಿಡಿ ಬಿಡುಗಡೆ ಮಾಡಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ದೂರು ಕೊಟ್ಟು ಅರ್ಧ ಗಂಟೆ ಬಳಿಕ ಸಿಡಿ ಬಿಡುಗಡೆಯಾಗುತ್ತೆ. ಕೆಲ ದಿನಗಳ ನಂತರ ಯುವತಿ ಒಂದು ವಿಡಿಯೋ ಹೇಳಿಕೆ ನೀಡುತ್ತಾಳೆ. ಆನಂತರ ಈಗ ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ಆಕೆ ಯಾರದೋ ಕೈಗೊಂಬೆಯಾಗಿ ಕೆಲಸಮಾಡುತ್ತಿದ್ದಾಳೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದರು.

ಒಂದಲ್ಲ, ನನ್ನ ವಿರುದ್ಧ ಇನ್ನೂ 10 ಸಿಡಿ ಬರಲಿ ಎದುರಿಸಲು ನಾನು ಸಿದ್ಧನಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಷಡ್ಯಂತ್ರದ ಹಿಂದೆ ಇರುವ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ. ನಾನು ದೇವರ ದಯೆಯಿಂದ ಆರೋಪ ಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇನ್ನು ನನ್ನ ಬಳಿಯೂ ಮಹತ್ವದ ಎವಿಡೆನ್ಸ್ ಗಳಿವೆ. ಅದನ್ನು ಬಿಡುಗಡೆ ಮಾಡಿದರೆ ನೀವೂ ಕೂಡ ಶಾಕ್ ಆಗುತ್ತೀರಿ. ಸಂದರ್ಭ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ. ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರ ಗೌರವ ಇತ್ತು. ಆದರೆ ಅವರ ಹೇಳಿಕೆಗಳನ್ನು ನೋಡಿ ನನಗೆ ಶಾಕ್ ಆಗಿದೆ ಎಂದು ಹೇಳಿದರು.

Home add -Advt

ಸಿಡಿ ಲೇಡಿ ಕಮಿಷ್ನರ್ ಗೆ ವಿಡಿಯೋ ಕಳುಹಿಸಿದ್ದು ನಿಜವೇ? ಎಸ್ ಐಟಿ ಮುಖ್ಯಸ್ಥರ ಸ್ಪಷ್ಟನೆಯೇನು?

ಮತ್ತೊಂದು ವಿಡೀಯೋ ಕಳಿಸಿದ ಸಿಡಿ ಲೇಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button