Belagavi NewsBelgaum NewsKannada NewsKarnataka News
*ಪತಂಜಲಿ ಶ್ರೀ ರಾಮಜನ್ಮೋತ್ಸವ ಉದ್ಘಾಟಿಸಿದ ರಮೇಶ ಜಂಗಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಪತಂಜಲಿ ಯೋಗಾಸನ ಕೇಂದ್ರದ ಆಶ್ರಯದಲ್ಲಿ ಇಂದು ಟಿಳಕವಾಡಿಯ ಗೊಮ್ಮಟೇಶ ಕಾಲೇಜಿನ ಸಭಾಂಗಣದಲ್ಲಿ ಶ್ರೀ ರಾಮಜನ್ಮದಿನಾಚರಣೆ ಆಚರಿಸಲ್ಪಟ್ಟಿತು.
ಬೆಳಿಗ್ಗೆ 9 ಘಂಟೆಗೆ ಹೋಮ-ಹವನ ಸಲ್ಲಿಸಲಾಯಿತು. ನಂತರ ಶ್ರೀ ರಾಮ ಪೂಜೆ, ಭಜನೆ ಹಾಗೂ ಭಕ್ತಿ ಸಂಗೀತ ನಡೆದವು.
ಪತಂಜಲಿಯ ಪ್ರಾಂತ ಮುಖ್ಯಸ್ಥ ಕಿರಣ ಮನ್ನೋಳಕರ, ಜಿಲ್ಲಾ ಮುಖ್ಯಸ್ಥ ಮೋಹನ ಬಾಗೇವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರು. ಇನ್ ಸ್ಟಿಟ್ಯೂಟ್ ಆಫ್ ಇಂಜನಿಯರ್ಸ ನಿಕಟ ಪೂವ೯ ಅಧ್ಯಕ್ಷರೂ, ಬೆಳಗಾವಿಯ “ರಂಗ ಸೃಷ್ಟಿ”ಅಧ್ಯಕ್ಷರೂ ಆದ ರಮೇಶ ಜಂಗಲ ಮತ್ತು ಮುಖ್ಯ ಅತಿಥಿಗಳಿಂದ ದೀಪ ಪ್ರಜ್ವಲನಗೊಂಡಿತು.
ಅಚ್ಚುಕಟ್ಟಾಗಿ ಜರುಗಿದ ಹೋಮ-ಹವನದ ಪ್ರಾಯೋಜತ್ವವನ್ನು ಶಾಹುನಗರ ಪತಂಜಲಿ ಕೇಂದ್ರದವರು ವಹಿಸಿಕೊಂಡಿದ್ದರು. ಕಾಯ೯ಕ್ರಮವನ್ನು ಡಾ.ಜೋತಿಬಾ ಬಾಡವಣಕರ ಅವರು ನಡೆಸಿಕೊಟ್ಟರು.
ಗೌರವ ಅತಿಥಿಗಳಾಗಿ ಪುರುಷೋತ್ತಮ ಪಟೇಲ, ಸಂಗೀತಾ ಕೋನಾಪುರೆ, ಚಂದ್ರಕಾಂತ ಖಂಡಗಾಳೆ, ಮದನ ಪಟೇಲ ಹಾಗೂ ಬಾಳಾತಾಯಿ ಖಡಕಭಾವಿ ಆಗಮಿಸಿದ್ದರು.