Kannada NewsKarnataka News

ಶಿಂದಿಕುರಬೇಟ ಗ್ರಾಮದಲ್ಲಿ ಪಾದಯಾತ್ರೆ ನಡೆಸಿದ ರಮೇಶ್ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ಬಿಜೆಪಿ ಯಾವ ಸಮಾಜದ ವಿರುದ್ಧವಿಲ್ಲ. ಹಾಗೆಯೇ ನಾವು ಕೂಡಾ ಎಲ್ಲ ಸಮಾಜಗಳನ್ನು ಪ್ರೀತಿಸಿ ಗೌರವಿಸುತ್ತಿದ್ದೇವೆ. ಜೊತೆಗೆ ಎಲ್ಲ ಸಮಾಜ ಬಾಂಧವರು ಸಹ ನನಗೆ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈಬಲಪಡಿಸಲು ಬಿಜೆಪಿಯ ಕಮಲ ಹೂವಿನ ಗುರ್ತಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ರಮೇಶ ಜಾರಕಿಹೊಳಿ ಮನವಿ ಮಾಡಿಕೊಂಡರು.

ಮಂಗಳವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಯಾರ ಅಪಪ್ರಚಾರಕ್ಕೂ ತಲೆ ಕೆಡಿಸಿಕೊಳ್ಳವುದಿಲ್ಲ ಎಂದು ಹೇಳಿದರು.
ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದೇನೆ. ಎಲ್ಲರಿಂದ ನನಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿದ್ದ ರಾಜಕೀಯ ವಿದ್ಯಮಾನಗಳನ್ನು ಜನರು ಗಮನಿಸಿದ್ದಾರೆ.

ನನಗಿಂತ ಮೊದಲೇ ನಮ್ಮ ಕಾರ್ಯಕರ್ತರು ಬಿಜೆಪಿಯೊಂದಿಗೆ ಮಾನಸಿಕವಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ನನಗಿಂತ ಹೆಚ್ಚು ಕ್ರೀಯಾಶೀಲರಾಗಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ನನ್ನ ನಿರ್ಧಾರಕ್ಕೆ ಅವರು ಬದ್ಧರಾಗಿ ಸ್ವಾಗತಿಸಿದ್ದಾರೆ. ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ನನಗೆ ಕಾಂಗ್ರೇಸ್ ಪಕ್ಷದ ನಾಯಕರುಗಳ ವಿರುದ್ಧ ಅಸಮಾಧಾನವಿದೆ. ಇದನ್ನು ವರಿಷ್ಠರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಲಿಲ್ಲ. ಇದುವರೆಗೂ ಪಕ್ಷವನ್ನು ಏಕೆ ಬಿಟ್ಟಿದ್ದೀರಿ? ಎಂದು ಯಾರೂ ಕೇಳಿಲ್ಲ. ಹೀಗಾಗಿ ನಮ್ಮಂತಹ ನಿಷ್ಠಾವಂತ ಪಕ್ಷದವರನ್ನು ಕಡೆಗಣಿಸುತ್ತಿರುವುದರಿಂದ ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ಉಳಿಗಾಲವಿಲ್ಲ ಎಂದು ಹೇಳಿದರು.

ವಿಠ್ಠಲ ಕಾಶಪ್ಪಗೋಳ, ಗುರುಸಿದ್ದಪ್ಪ ಕಡೇಲಿ, ನಾಗಲಿಂಗ ಪೋತದಾರ, ಮಹಾಂತೇಶ ಹಳ್ಳಿ ಜಿ.ಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಭೀಮಶಿ ಬಿರನಾಳಿ, ರಾಮಚಂದ್ರ ಬಂತಿ, ಮಂಜುನಾಥ ಗುಡಕೇತ್ರ, ಎಂ.ಡಿ.ತಟಗಾರ, ದಾವಲ ದಬಾಡಿ,ಮಾರುತಿ ಜಾಧವ, ಓಂಕಾರ ಗಾಡಿವಡ್ಡರ, ರಫೀಕ ಮಕಾನದಾರ, ಪ್ರಕಾಶ ಭೋವಿ, ಅಮೃತ ಕಾಳ್ಯಾಗೋಳ,ವಿಠ್ಠಲ ಸಣ್ಣಕ್ಕಿ, ಮಾನಿಂಗ ತೆಳಗೇರಿ, ಜಯಶೀಲ ಶೆಟ್ಟಿ, ಶಂಕರ ಬಿಲಕುಂದಿ, ಆದಮಸಾಬ ಮಕಾನದಾರ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಂತರ ರಮೇಶ ಜಾರಕಿಹೊಳಿ ಅವರು ಪಾಮಲದಿನ್ನಿ, ಮಲ್ಲಾಪೂರ ಪಿಜಿ, ನಂದಗಾಂವ, ಮುತ್ನಾಳ, ಖಾನಾಪೂರ, ಶಿವಾಪೂರ, ಯೋಗಿಕೊಳ್ಳ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯ ಕೈಗೊಂಡರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button