Latest

*ನಡುರಸ್ತೆಯಲ್ಲೇ ಮಹಿಳೆಯ ಭೀಕರ ಕೊಲೆ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಯುಗಾದಿ ಹಬ್ಬದ ದಿನವೇ ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜಂಜಂ ಕಾಲೋನಿಯಲ್ಲಿ ನಡೆದಿದೆ.

ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಕಾರಿನಲ್ಲಿ ಬೆನ್ನಟ್ಟಿ ಬಂದಿದ್ದು, ಬೈಕ್ ಗೆ ಕಾರು ಡಿಕ್ಕಿಹೊಡೆಸಿ ಮಹಿಳೆಯನ್ನು ಕೆಡವಿದ್ದಾರೆ. ಬಳಿಕ ಕೆಳಗೆ ಬಿದ್ದ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ.

Home add -Advt

ಜಂಜಂ ಕಾಲೋನಿ ನಿವಾಸಿ ನುಜತ್ ಸುಲ್ತಾನ್ (36) ಕೊಲೆಯಾದ ಮಹಿಳೆ. ಅಜೀಮ್ ಶೇಖ್, ವಸೀಂ ಶೇಖ್,ನಯಿಂ, ನದೀಂ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ. ಗುಲಬುರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button