ಪೆಯ್ಡ್ ಪುಂಡರು ಕಾನೂನು, ಪೊಲೀಸರು ಕಸಕ್ಕೆ ಸಮಾನವೆಂಬಂತೆ ವರ್ತಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಯ ಪೆಯ್ಡ್ ಪುಂಡರು ಕಾನೂನು, ಪೊಲೀಸರು ಕಸಕ್ಕೆ ಸಮಾನ ಎಂಬಂತೆ ವರ್ತಿಸುತ್ತಿದ್ದಾರೆ. ಸಿಡಿ ಪ್ರಕರಣ ಹೊರಬಂದು 27 ದಿನಗಳಾಗಿವೆ. ಆದರೂ ಯುವತಿ ಪತ್ತೆಹಚ್ಚಲಾಗಿಲ್ಲ, ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿ 3-4 ದಿನಗಳಾಗಿವೆ ಆದರೂ ಬಂಧಿಸಲಾಗಿಲ್ಲ. ಬಸವರಾಜ್ ಬೊಮ್ಮಾಯಿಯವರಿಗೆ ನೀವೇ ಗೃಹ ಮಂತ್ರಿಗಳೆಂದು ನೆನಪಿಸಬೇಕಾದ ಸ್ಥಿತಿ ಬಂದಿದೆ ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಕಾಂಗ್ರೆಸ್, ಯುವತಿ ತನ್ನ ಕುಟುಂಬವನ್ನು ಬೆದರಿಸಲಾಗುತ್ತಿದೆ ಎಂದು ಪದೇ ಪದೇ ಆರೋಪಿಸಿದ್ದಾಳೆ, ತನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಅಂಗಲಾಚಿದ್ದಾಳೆ, ಬಿಜಾಪುರದಲ್ಲಿದ್ದ ಯುವತಿ ಕುಟುಂಬ ಬೆಳಗಾವಿಯಲ್ಲಿ ದೂರು ದಾಖಲಿಸುತ್ತದೆ. ಬೆಳಗಾವಿಯಲ್ಲಿ ರಮೇಶ್ ಬೆಂಬಲಿಗರು ಕಾನೂನು, ಪೊಲೀಸರನ್ನು ಲೆಕ್ಕಕ್ಕೆ ಇಡುತ್ತಿಲ್ಲ ಆದರೂ ಗೃಹಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದೆ.
ಸಿಡಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಬೆಳಗಾವಿಯಲ್ಲಿ ಏನಾಗುತ್ತಿದೆ ಎನ್ನುವುದು ಜಗತ್ತಿಗೆ ತಿಳಿದ ವಿಚಾರ, ಹೀಗಿರುವಾಗ ಯುವತಿ ಕುಟುಂಬ ಸ್ವತಂತ್ರವಾಗಿ ತಮ್ಮಿಚ್ಛೆಯಂತಿದೆಯೇ ಎನ್ನುವ ಅನುಮಾನ ಮೂಡುತ್ತದೆ. ಗೃಹ ಸಚಿವರೇ, ಆರೋಪಿಯನ್ನು ಬಂಧಿಸದೆ, ಯುವತಿ ಕುಟುಂಬಕ್ಕೆ ರಕ್ಷಣೆ ನೀಡದೆ ನೀವು ಮಾಡುತ್ತಿರುವುದಾದರೂ ಏನು ಎಂದು ವಾಗ್ದಾಳಿ ನಡೆಸಿದೆ.
ಸಿಡಿ ಕೇಸ್: ವಿಚಾರಣೆಗೆ ಹಾಜರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ