Kannada NewsLatest

ಬೆಲೆ ಏರಿಕೆ ವಿರುದ್ಧ ಹೋರಾಟ ನಮ್ಮ ಚುನಾವಣೆ ಅಜಂಡಾ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಈ ಭಾಗದ ಭವಿಷ್ಯತ್ತಿನ ನಾಯಕ. ಅಭಿವೃದ್ಧಿ ಒಂದೇ, ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟ ಚುನಾವಣಾ ಅಜಂಡಾ. ಅನುಕಂಪದ ಅಲೆಯನ್ನು ನಾವು ಟಚ್ ಮಾಡಲೂ ಹೋಗಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಓರ್ವ ಹೆಣ್ಣುಮಗಳಾಗಿ ಮಂಗಲಾ ಅಂಗಡಿ ಅವರ ನೋವಿನಲ್ಲಿ ನಾನೂ ಕೂಡ ಭಾಗಿಯಾಗಿದ್ದೀನಿ. ನಾನು, ನಮ್ಮ ಪಕ್ಷ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಕೂಡ ಮಂಗಲಾ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇವೆ ಅದು ಬೇರೆ. ಆದರೆ ಚುನಾವಣಾ ವಿಚರವಾಗಿ ಬಂದಾಗ ರಾಜ್ಯದಲ್ಲಿ ಒಟ್ಟು 26 ಸಂಸದರಿದ್ದಾರೆ. ಆದರೆ ಪ್ರವಾಹ ಬಂದಾಗ, ಜನರಿಗೆ ಸಂಕಷ್ಟ ಎದುರಾದಗ ಯಾವೊಬ್ಬ ಸಂಸದರೂ ಕೂಡ ಬರಲಿಲ್ಲ, ಪ್ರಧಾನಿ ಮೋದಿ, ಅಮಿತ್ ಶಾ ಬಂದು ಕಷ್ಟ ಆಲಿಸಿಲ್ಲ ಎಂದು ಗುಡುಗಿದರು.

Home add -Advt

ಜನಪ್ರತಿನಿಧಿಯಾಗಿ ನಾವು ಯಾಕೆ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ? ಜನರಿಗೆ ಸಮಸ್ಯೆ ಎದುರಾದಾಗ, ಕಷ್ಟಬಂದಾಗ ಸ್ಪಂದಿಸಿ, ಸಮಸ್ಯೆಗಳನ್ನು ಪರಿಹರಿಸಲಿ ಎಂದು ಇವರು ಆಯ್ಕೆಯಾದ ಬಳಿಕ ಜನರತ್ತ ತಿರುಗಿಯೂ ನೋಡುವುದಿಲ್ಲ ಎಂದ ಮೇಲೆ ಪ್ರಯೋಜನವೇನು? ಸತೀಶ್ ಜಾರಕಿಹೊಳಿಯವರು ಈ ಭಾಗದ ಜರು ಅನುಭವಿಸುತ್ತಿರುವ ಕಷ್ಟಗಳನ್ನು ಕಣ್ಣಾರೆ ನೋಡಿದವರು, ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕೆಂದು ಹೊರಾಟ ನಡೆಸುತ್ತಿರುವವರು ಇದನ್ನೆ ಪ್ರಮುಖ ಅಸ್ತ್ರವಾಗಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

Related Articles

Back to top button