Kannada NewsLatest

ಮತ್ತೊರ್ವ ಮಂತ್ರಿಗೆ ಸಿಡಿ ಬ್ಲ್ಯಾಕ್ ಮೆಲ್: ರಮೇಶ್ ಜಾರಕಿಹೊಳಿ ಆರೊಪ; ಆತ ಮೆಂಟಲ್ ಕೇಸ್ ಎಂದ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಮಂತ್ರಿಯೋರ್ವರಿಗೆ ಡಿ.ಕೆ.ಶಿ ಕಾಂಗ್ರೆಸ್ ಸೇರ್ತಿಯಾ ಇಲ್ಲ ಸಿಡಿ ಬಿಡುಗಡೆ ಮಾಡ್ಲಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಸಚಿವರೊಬ್ಬರನ್ನು ಬೆದರಿಸುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಬರ್ತಿಯೋ ಇಲ್ಲ ಸಿಡಿ ಬಿಡಲೋ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಸಿಡಿ ರಾಜಕಾರಣ ಪ್ರಸ್ತಾಪಿಸಿದ್ದಾರೆ.

ನಾವು ಯುದ್ಧ ಮಾಡುವವರು ಹೊರತು ಷಡ್ಯಂತ್ರ ಮಾಡುವವರಲ್ಲ. ಡಿ.ಕೆ.ಶಿವಕುಮಾರ್ ಪತ್ನಿಯೂ ನನ್ನ ತಂಗಿ ಇದ್ದ ಹಾಗೇ. ಮನೆ ಒಡೆಯಬಾರದು. ನನ್ನ ಬಳಿ ಸಾಕ್ಷಾಧಾರಗಳಿದ್ದರೂ ಬಿಡಲ್ಲ. ನನಗೊಬ್ಬನಿಗೆ ತೊಂದರೆ ಆಗಿದೆ. ಅದರಿಂದ ನಾನು ಹೊರಗೆ ಬಂದಿದ್ದೇನೆ. ಬೇರೆಯವರಿಗೆ ಈರೀತಿ ಆಗಬಾರದು. ಡಿ.ಕೆ.ಶಿವಕುಮಾರ್ ಅಂತಹ ವ್ಯಕ್ತಿಗೆ ಅಧಿಕಾರ ಸಿಕ್ಕರೆ ಏನಾಗಬಹುದು. ಯಾವ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ತಿರುಗೇಟು:

Home add -Advt

ರಮೇಶ್ ಜಾರಕಿಹೊಳಿ ಗಂಭೀರ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಮೆಂಟಲ್ ಆಸ್ಪತ್ರೆ ಅಭ್ಯರ್ಥಿಗಳ ಬಗ್ಗೆ ನಾನು ಮಾತನಾಡಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button