Latest

ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್‌ವುಡ್‌ ಗೆ ಡ್ರಗ್ಸ್‌ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾಣಿ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಬೆಂಗಳೂರಿನ ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ, ಸಂಜನಾ ಅವರನ್ನು ವಶಕ್ಕೆ ಪಡೆದಿದ್ದಾರೆ.

Home add -Advt

ಸಂಜನಾ ಅವರ ಆಪ್ತೆ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸಂಜಾನ ಮನೆಗೆ ಸಿಸಿಬಿ ದಾಳಿ ನಡೆಸಿದ ವೇಳೆ ಮನೆಗೆ ಬರದಂತೆ ಅಧಿಕಾರಿಗಳ ವಿರುದ್ಧ ಸಂಜನಾ ರಂಪಾಟ ನಡೆಸಿದ ಪ್ರಸಂಗವೂ ನಡೆದಿದೆ. ಸರ್ಜ್ ವಾರಂಟೆ ಪಡೆದು ಬಂದ ಹಿನ್ನಲೆಯಲ್ಲಿ ಮನೆಯಲ್ಲಿ ಶೋಧಕ್ಕೆ ಅಡ್ಡಿಪಡಿಸಿದರೆ ನಿಮಗೇ ತೊಂದರೆಯಾಗಲಿದೆ ಎಂದು ಸಿಸಿಬಿ ಅಧಿಖಾರಿಗಳು ಗದರಿದ ಬಳಿಕ ಸಂಜನಾ ತಣ್ಣಗಾಗಿದ್ದಾರೆ.

ಸಧ್ಯ ಸಿಸಿಬಿ ವಶದಲ್ಲಿರುವ ಸಂಜನಾರನ್ನು ಮನೆಯಲ್ಲೇ ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಅವರನ್ನು ಕಚೇರಿಗೆ ಕರೆ ತರುವ ಸಾಧ್ಯತೆಯಿದೆ

Related Articles

Back to top button