Election NewsKannada NewsKarnataka NewsPolitics

*ಕಾಂಗ್ರೆಸ್ ನ ಅರ್ಧ ಡಜನ್‌ ನಾಯಕರ ಮೇಲೆ ಕೇಸ್ ಇದೆ: ಶ್ರೀರಾಮುಲು*

ಪ್ರಗತಿವಾಹಿನಿ ಸುದ್ದಿ: ದೇಶದ ಪ್ರಧಾನಿ ಮೋದಿ ಅವರು 400 ಸ್ಥಾನ ಗೆಲ್ಲುವ ಗುರಿ ಹೊಂದಿದ್ದಾರೆ. ಅದರಲ್ಲಿ ಬಳ್ಳಾರಿ ಕ್ಷೇತ್ರವೂ ಒಂದು, ಈಗಾಗಲೇ ಎಲ್ಲ ಕಡೆ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ. ನಾಳೆಯುಂದ ಎರಡನೇ ಸುತ್ತಿನ ಪ್ರಚಾರ ಆರಂಭಿಸುವೆ. ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲುತ್ತೇವೆ, ಮೋದಿ ಅಲೆಯಿಂದ ಯಡಿಯೂರಪ್ಪ ಶಕ್ತಿಯಿಂದ ನಮಗೆ ಗೆಲುವಾಗುತ್ತೆ. ಜನಾರ್ಧನರ್ ರೆಡ್ಡಿಯವರು ಕೂಡ ನಮ್ಮ ಜೊತೆಗಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ರಾಮುಲು ತಿಳಿಸಿದರು. 

Home add -Advt

ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನಾರ್ಧನ್ ರೆಡ್ಡಿಯೇ ಶ್ರೀರಾಮುಲು ಸೋಲಿಸ್ತಾರೆ ಎಂದಿದ್ದ ಭೀಮಾನಾಯ್ಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರು ಯಾರನ್ನು ಮನೆಗೆ ಕಳುಹಿಸ್ತಾರೆ ಗೊತ್ತಾಗುತ್ತೆ. ಇಂಡಿಯಾ ಒಕ್ಕೂಟ ಈಗಾಗಲೇ ಸೋತು ಹೋಗಿದೆ, ನಾವೆಲ್ಲ ಒಡೆದು ಹೋದ್ರೆ ಗೆಲ್ಲುತ್ತೇವೆ ಅನ್ನೋ ಭ್ರಮೆ ಇತ್ತು, ಈಗ ನಾವು ಒಂದಾಗಿರೋದು ಅವರಿಗೆ ಭಯ ಹುಟ್ಟಿಸಿದೆ. ಮತಿ ಭ್ರಮಣೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಭೀಮಾನಾಯ್ಕ್ ಗೆ ಬಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.‌

ಜನಾರ್ಧನ್ ರೆಡ್ಡಿಯವರ ಮೇಲೆ ಕೇಸ್ ಇರೋ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನ ಅರ್ಧ ಡಜನ್ ನಾಯಕರ ಮೇಲೆ ಕೇಸ್ ಇವೆ.‌ ರಾಹುಲ್ ಗಾಂಧಿ ಮೇಲೆ ಕೇಸ್, ಸೋನಿಯಾ ಗಾಂಧಿ ಮೇಲೆ ಕೇಸ್ ಇದೆ. ರಾಜ್ಯ ಕಾಂಗ್ರೇಸ್ ಸರ್ಕಾರದ ಅರ್ಧ ಡಜನ್ ಮಂದಿ ಮೇಲೆ ಕೇಸ್ ಇವೆ ಎಂದು ಆರೋಪಿಸಿದರು.

Related Articles

Back to top button