
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತಷ್ಟು ಜೀವಂತವಾಗಿಡುವ ನಿಟ್ಟಿನಲ್ಲಿ ಸಿಎಂ ಬಿಎಸ್ ವೈ ವಿರೋಧಿ ಟೀಂ ನಿಂದ ಪ್ರಯತ್ನಗಳು ಮುಂದುವರೆದಿದ್ದು, ಈಗಾಗಲೇ ಶಾಸಕ ಅರವಿಂದ ಬೆಲ್ಲದ್ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಸಚಿವ ಸಿ.ಪಿ.ಯೋಗೇಶ್ವರ್ ಸಲಹೆ ಮೇರೆಗೆ ಬೆಲ್ಲದ್ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಶಾಸಕ ರಮೇಶ್ ಜಾರಕಿಹೊಳಿ ಕೂಡ ಸುತ್ತೂರು ಮಠಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈಗೆ ತೆರಳಿದ್ದ ರಮೇಶ್ ಜಾರಕಿಹೊಳಿ ನಾಳೆ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ವಿರೋಧಿ ಬಣಗಳ ಕಾರ್ಯತಂತ್ರದ ಜೊತೆಗೆ ಇದೀಗ ರಮೇಶ್ ಜಾರಕಿಹೊಳಿ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಮುಂಬೈಯಿಂದ ಬೆಂಗಳೂರಿಗೆ ಆಗಮಿಸಿ ಸುತ್ತೂರು ಮಠದ ಶ್ರೀಗಳ ಆಶಿರ್ವಾದ ಪಡೆದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಅವರು ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.
ಈಗ ಸುತ್ತೂರು ಮಠದ ಸುತ್ತ ರಾಜಕೀಯ ವಾಸನೆ ಹರಡತೊಡಗಿದೆ.
ರಾಜ್ಯಕ್ಕೆ ಕಾಲಿಟ್ಟ ಮತ್ತೊಂದು ಮಹಾಮಾರಿ; ಏನಿದು ಡೆಲ್ಟಾ ಪ್ಲಸ್ ವೈರಸ್?