ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ; ಕಾರಣ ಬಿಚ್ಚಿಟ್ಟ ಮೂಗುತಿ ಸುಂದರಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ –  ಆಸ್ಟ್ರೇಲಿಯನ್ ಓಪನ್ ನಲ್ಲಿ ಸೋತಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಟೆನ್ನಿಸ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
   2003 ರಿಂದ ನಿರಂತರವಾಗಿ ಅಂತಾರಾಷ್ಟ್ರೀಯ ಟೆನ್ನಿಸ್ ಆಡುತ್ತ ಬಂದಿರುವ ಸಾನಿಯಾ ಟೆನ್ನಿಸ್ ಜೊತೆಗೆ ತಮ್ಮ ಗ್ಲಾಮರ್ ನಿಂದಲೂ ಹೆಸರು ಮಾಡಿದ್ದಾರೆ. ಟೆನ್ನಿಸ್ ಅಂಗಳದ ಮೂಗುತಿ ಸುಂದರಿ ಎಂದೇ ಖ್ಯಾತರಾಗಿದ್ದಾರೆ‌‌.‌ ಹೈದರಾಬಾದ್ ಮೂಲದ ಈ ಟೆನ್ನಿಸ್ ತಾರೆ ಪಾಕಿಸ್ತಾನಿ ಕ್ರಿಕೆಟ್ ಆಟಗಾರನ್ನು ವಿವಾಹವಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.
   ನನಗೆ ಇನ್ನೂ ಆಡುವ ಸಾಮರ್ಥ್ಯವಿದೆ ಎನಿಸಿದರೂ ದೇಹ ಸ್ಪಂದಿಸುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ. ಹಾಗಾಗಿ ಟಿನ್ನಿಸ್ ನಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ

Related Articles

Back to top button