Kannada NewsLatest

ಉಮೇಶ್ ಕತ್ತಿ ಡೈಮಂಡ್ ಇದ್ದಂತೆ; ಈ ಬಾರಿ ಸಚಿವ ಸ್ಥಾನ ಖಚಿತ ಎಂದ ರಮೇಶ್ ಕತ್ತಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶಾಸಕ ಉಮೇಶ್ ಕತ್ತಿ ಡೈಮಂಡ್ ಇದ್ದಂತೆ. ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸಹೋದರ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ನೀಡುವ ಆತ್ಮವಿಶ್ವಾಸ ನನಗಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ರಮೇಶ್ ಕತ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕತ್ತಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 17 ಜನ ಶಾಸಕರು ಹೊರಗಿನಿಂದ ಬಂದವರು ಕಾರಣ. ಹಾಗಾಗಿ ಅವರೆಲ್ಲರಿಗೂ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಮೂಲ ಬಿಜೆಪಿಗರು ಕೆಲ ಸಂದರ್ಭದಲ್ಲಿ ತ್ಯಾಗ ಮಾಡುವ ಸಂದರ್ಭ ಬರುತ್ತದೆ ಅದು ಸಹಜ ಪ್ರಕ್ರಿಯೆ. ಮುಂಬರುವ ದಿನಗಳಲ್ಲಿ ಬಿಜೆಪಿ ವರಿಷ್ಠರು ಸಹೋದರ ಉಮೇಶ್ ಕತ್ತಿಗೆ ಸೂಕ್ತ ಸ್ಥಾನ ನೀಡುವ ವಿಶ್ವಾಸವಿದೆ ಎಂದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button