Kannada NewsKarnataka News

ವಿಮಲ್ ಫೌಂಡೇಶನ್ ಕಾರ್ಯಕ್ಕೆ ರಮೇಶ ಜಾರಕಿಹೊಳಿ ಪ್ರಶಂಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬುಧವಾರ ನಗರದ ವಿಮಲ್ ಫೌಂಡೇಶನ್ ಕಚೇರಿಗೆ ಭೇಟಿ ನೀಡಿ ಫೌಂಡೇಶನ್ ಕಾರ್ಯವನ್ನು ಪ್ರಶಂಸಿಸಿದರು.

ವಿಮಲ್ ಫೌಂಡೇಶನ್ ಚೇರಮನ್ ಕಿರಣ ಜಾಧವ ಮತ್ತು ತಂಡ ಕಳೆದ ಬಾರಿ ಪ್ರವಾದ ಸಂದರ್ಭದಲ್ಲಿ ಮತ್ತು ಈಚಿನ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ಜನಪರ ಕಾರ್ಯವನ್ನು ರಮೇಶ ಜಾರಕಿಹೊಳಿ ಶ್ಲಾಘಿಸಿದರು.

ಸಂಸ್ಥೆಯ ಎಲ್ಲ ಒಳ್ಳೆಯ ಕೆಲಸದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ ರಮೇಶ ಜಾರಕಿಹೊಳಿ, ಮುಂಬರುವ ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿಮಲ್ ಫೌಂಡೇಶನ್ ಇಂತಹ ಸಂಕಷ್ಟದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸದಾ ನನ್ನ ಬೆಂಬಲವಿದೆ ಎಂದರು.

ಕೆಲವು ಪ್ರದೇಶದಲ್ಲಿ ಉಂಟಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ ರಮೇಶ ಜಾರಕಿಹೊಳಿ, ನಗರ ಸ್ವಚ್ಛತೆಯ ಕಡೆಗೂ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.

ಇದೇ ವೇಳೆ ವಿಮಲ್ ಫೌಂಡೇಶನ್ ಪದಾದಿಕಾರಿಗಳು ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ಕಿರಣ ಜಾಧವ, ಶ್ರೀನಿವಾಸ ರೆಡ್ಡಿ, ಸಂತೋಷ ಪೆಡ್ನೇಕರ್, ಗಣೇಶ ನಂದಗಡಕರ್, ಅನೂಪ ಕಾಟೆ, ಪ್ರೆಡ್ನಿ ಶಿಂಧೆ, ಅಮೃತ್ ಕಾರೇಕರ್, ಪ್ರಿಯಾಂಕಾ ಕಲಘಟಕರ್, ಅಮರ್ ಸರದೇಸಾಯಿ, ಬಾಲಿ ಜೋಶಿ, ಸಂಜಯ ಕಡೋಲ್ಕರ್ ಮೊದಲಾದವರು ಇದ್ದರು.

     

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button