
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಅಖಾಡ ದಿನ ದಿನವೂ ರಂಗೇರುತ್ತಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕಿ, ಮಾಜಿ ಸಂಸದೆ ನಟಿ ರಮ್ಯಾ, ತಮಗೆ ಬಿಜೆಪಿಯಿಂದ ಆಹ್ವಾನ ಬಂದಿತ್ತು ಎಂದು ಹೇಳಿದ್ದಾರೆ.
ಇಂಗ್ಲೀಷ್ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ನಟಿ ರಮ್ಯಾ, ತಮಗೆ ಬಿಜೆಪಿಯ ಉನ್ನತ ನಾಯಕರೊಬ್ಬರು ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದರು. ಅಲ್ಲದೇ ಸಚಿವರನ್ನಾಗಿ ಮಾಡುತ್ತೇವೆ ಎಂದೂ ಆಫರ್ ನೀಡಿದ್ದರು ಎಂದಿದ್ದಾರೆ.
ನಾನು ಕೆಲವು ಬಾರಿ ಕಾಂಗ್ರೆಸ್ ವಿರುದ್ಧ ಮಾತನಾಡಿದಾಗ ಬಿಜೆಪಿಯಿಂದ ಆಫರ್ ಬಂದಿತ್ತು. ಆದರೆ ನಾನು ಯಾವುದೇ ಭಿನ್ನಮತ ಹೊಂದಿಲ್ಲದ ಕಾರಣ ಬಿಜೆಪಿಗೆ ಹೋಗಿಲ್ಲ. ನನಗೆ ಬಿಜೆಪಿ ಮೇಲೆ ಯಾವುದೇ ದ್ವೇಷ ಇಲ್ಲ, ಆದರೆ ಅವರ ಕೊಲವೊಂದು ಸಿದ್ಧಾಂತಗಳಿಗೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಈಬಾರಿ ಕಾಂಗ್ರೆಸ್ 6 ಕ್ಷೇತ್ರಗಳ ಟಿಕೆಟ್ ನ್ನು ನನಗೆ ಆಫರ್ ಮಾಡಿತ್ತು. 6 ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರವನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ ನಾನು ಇನ್ನೂ ತಯಾರಾಗಿಲ್ಲ. ಚುನಾವಣೆಗೆ ನಿಲ್ಲಲು ಗ್ರೌಂಡ್ ನಲ್ಲಿ ಕೆಲಸ ಮಾದಬೇಕು. ಅದಕ್ಕಾಗಿ ಸಂಪೂರ್ಣ ಸಮಯ ವಿನಯೋಗಿಸಬೇಕು. ಅದು ಸಧ್ಯಕ್ಕೆ ನನಗೆ ಸಾಧ್ಯವಿಲ್ಲ. ನಾನು ಸ್ಪರ್ಧೆ ಮಾಡಲ್ಲ ಪಕ್ಷಕ್ಕೆ ಬೆಂಬಲ ಕೊಡುತ್ತೇನೆ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ