ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕ್ರಿಕೇಟ್ ಪಂದ್ಯಾವಳಿಯಾದ ರಣಜಿ ಟ್ರೋಫಿಯನ್ನು ಈ ಬಾರಿ ಫೆ.16ರಿಂದ ಮಾ.5ರವರೆಗೆ ಆಯೋಜಿಲು ಬಿಸಿಸಿಐ ನಿರ್ಧರಿಸಿದೆ.
ಈ ಮೊದಲು ನಿರ್ಧರಿಸಿದ್ದಂತೆ ಜ.13ರಿಂದಲೇ ರಣಜಿ ಟ್ರೋಫಿ ಆರಂಭವಾಗಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಿಕೇಟ್ ಪಂದ್ಯಾವಳಿ ಮುಂದೂಡಲ್ಪಟ್ಟಿತ್ತು. ಪರೀಷ್ಕೃತ ದಿನಾಂಕದ ಪ್ರಕಾರ ಫೆ.16ರಿಂದ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ.
ಈ ಬಾರಿ ಅಹಮದಾಬಾದ್, ಕೋಲ್ಕತ್ತಾ, ತ್ರಿವೇಂದ್ರಮ್, ಕಟಕ್, ಚೆನ್ನೈ, ಗೌಹಾತಿ, ಹೈದರಾಬಾದ್ ಹಾಗೂ ರಾಜಕೋಟ್‌ನಲ್ಲಿ ಪಂದ್ಯಗಳು ನಡೆಯಲಿವೆ.
ಕೆಂಪು ಚೆಂಡಿನ ಟೂರ್ನಮೆಂಟ್ ನಡೆದಿರಲಿಲ್ಲ
2020ರ ಮಾರ್ಚ್ ನಲ್ಲಿ ದೇಶದಲ್ಲಿ ಕೋವಿಡ್ ಉಲ್ಬಣಿಸಿದ ಬಳಿಕ ಕೆಂಪು ಚೆಂಡಿನ ಪಂದ್ಯಾವಳಿ ನಡೆದಿರಲಿಲ್ಲ. ಪ್ರಸಕ್ತ ವರ್ಷ ರಣಜಿ ಟ್ರೋಫಿ ನಡೆಯಲಿರುವುದು ಕ್ರಿಕೇಟ್ ಪ್ರಿಯರಿಗೆ ಸಂತಸ ತಂದಿದೆ. ಪಂದ್ಯಾವಳಿಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.
ಬಡವರ ಏಳಿಗೆ ಬಜೆಟ್ ಮೂಲ ಉದ್ದೇಶ; ಅಭಿವೃದ್ಧಿಪರ ಜನಸ್ನೇಹಿ ಬಜೆಟ್ ಗೆ ಅಭಿನಂದನೆ ಎಂದ ಪ್ರಧಾನಿ ಮೋದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ