ಪ್ರಗತಿವಾಹಿನಿ ಸುದ್ದಿ; ರಾಣೆಬೆನ್ನೂರು: ಅಂಧರ ಬಾಳಲ್ಲಿ ಬೆಳಕಾದ , ಅಂಧರ ಜೀವ ಬೆಳಕು ಸಂಸ್ಥೆ ರಾಣೆಬೆನ್ನೂರಿನಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಅಂಧ ಮಕ್ಕಳು ಅತಿ ಉತ್ಸಾಹದಿಂದ ಪಾಲ್ಗೊಂಡು ನಗರದಲ್ಲಿ ಸಸಿಗಳನ್ನು ನೆಟ್ಟು ಇತರರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ನಾಗನಗೌಡ ಬೆಳ್ಳುಳ್ಳಿ, ಪರಿಸರ ಅಂದರೆ ಪ್ರಕೃತಿ. ನಮ್ಮ ಸುತ್ತಮುತ್ತಲಿನ ವಸ್ತುಗಳಿಗೆ ಸಾಮಾನ್ಯವಾಗಿ ಪರಿಸರ ಎಂದು ಕರೆಯುತ್ತೇವೆ. ಪರಿಸರವು ನಮ್ಮ ದೈನಂದಿನ ಜೀವನಕ್ಕೆ ತುಂಬಾ ಉಪಯುಕ್ತವಾಗಿದೆ ಪರಿಸರವನ್ನು ಬಿಟ್ಟು ಮಾನವರು ಬದುಕಲು ಉಸಿರಾಡಲು ಜೀವಿಸಲು ಸಾಧ್ಯವಿಲ್ಲ. ಒಂದು ವೇಳೆ ಗಾಳಿ ನಿಂತರೆ ಮನುಷ್ಯನ ಜೀವವು ಸತ್ತಹಾಗೆ ಹೀಗಾಗಿ ಪರಿಸರವನ್ನು ಉಳಿಸುವುದು ಬೆಳೆಸುವುದು ನಮ್ಮ ಹಾಗೂ ನಿಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ನಾಶವಾದರೆ ಜಲಮಾಲಿನ್ಯ ನೆಲ ಮಾಲಿನ್ಯ, ಶಬ್ದ ಮಾಲಿನ್ಯ, ಮುಂತಾದ ಮಾಲಿನ್ಯಗಳು ಉಂಟಾಗಿ ಜನರು ವಿವಿಧ ರೋಗರುಜಿನೆಗಳಿಗೆ ಈಡಾಗುತ್ತಾರೆ ಪರಿಸರ ಸಂರಕ್ಷಣೆಯ ಕುರಿತು ಹಲವಾರು ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಅವುಗಳನ್ನು ಯಶಸ್ವಿಗೊಳಿಸಲು ಮುಂದಾಗದೆ ಇರುವುದು ದುರಾದೃಷ್ಟಕರ ಸಂಗತಿ. ಪ್ರತಿದಿನವೂ ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಈ ವೇಳೆ ರವಿ ಕುಲಕರ್ಣಿ ವಿಕ್ರಂ ಶೆಟ್ಟರ್ ಅಶೋಕ್ ಅರ್ಕೆರಿ ಸೋಮಶೇಖರ್ ಮುಂಡರಗಿ ಮಲ್ಲಿಕಾರ್ಜುನ್ ಅಂಗಡಿ ಇತರೆ ಗೌರವಾನ್ವಿತ ವ್ಯಕ್ತಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ