Belagavi NewsBelgaum NewsKannada NewsKarnataka NewsLatest

*ರಂಗಸಂಪದದಿಂದ ‘ನಿನಾಸಂ ತಿರುಗಾಟ’*

ಪ್ರೇಕ್ಷಕರಲ್ಲಿ ಹೆಚ್ಚಿನ ಅಭಿರುಚಿ ಮೂಡಿಸಿದ್ದೇ ರಂಗಸಂಪದ: ಎಸ್. ಎಂ. ಕುಲಕರ್ಣಿ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಸುಮಾರು ೪೫ ವರ್ಷಗಳ ಇತಿಹಾಸವನ್ನು ರಂಗಸಂಪದ ಹೊಂದಿದೆ. ಪ್ರೇಕ್ಷಕರಲ್ಲಿ ನಾಟಕ ನೋಡುವ ಹೆಚ್ಚಿನ ಅಭಿರುಚಿಯನ್ನು ಮೂಡಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ. ಹಲವಾರು ಕಷ್ಟನಷ್ಟಗಳಿಂದ ನಡೆದು ಬಂದಿರುವ ರಂಗಸಂಪದ ತಂಡ ಇಂದು ಕರ್ನಾಟಕದಾದ್ಯಂತ ರಂಗಾಸಕ್ತರ ಪ್ರೀತಿಗೆ ಪಾತ್ರವಾಗಿದೆ ಎಂದು ಹಿರಿಯ ನ್ಯಾಯವಾದಿ ಎಸ್ ಎಂ.ಕುಲಕರ್ಣಿ ಇಂದಿಲ್ಲಿ ಹೇಳಿದರು.

ನಗರದ ರಂಗಸಂಪದವರು ನಿನ್ನೆ ದಿ. ೯ ರಂದು ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಿನಾಸಂ ತಂಡದವರ ‘ನಿನಾಸಂ ತಿರುಗಾಟ’ ದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ ರಚನೆಯ ಕೆ. ಜಿ.ಕೃಷ್ಣಮೂರ್ತಿ ನಿರ್ದೇಶನದ ಹುಲಿ ನೆರಳು ನಾಟಕದ ಪ್ರದರ್ಶನಗೊಂಡಿತು. ಎರಡು ನಾಟಕಗಳ ಈ ಉತ್ದವವನ್ನು ಖ್ಯಾತ ನ್ಯಾಯವಾದಿ, ರಂಗಸಂಪದದ ಪೋಷಕ ಎಸ್. ಎಂ. ಕುಲಕರ್ಣಿಯವರು ಜಾಗಟೆಯನ್ನು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯಪಟ್ಟರು.

ಮುಂದೆ ಮಾತನಾಡುತ್ತ ಕುಲಕರ್ಣಿಯವರು ಪ್ರೇಕ್ಷಕರು ನಾಟಕ ನೋಡುವುದರೊಂದಿಗೆ ಧನಸಹಾಯವನ್ನು ನೀಡುವುದು ಅಷ್ಟೇ ಅತ್ಯವಶ್ಯವಾಗಿದೆ. ಜನರು ಎಲ್ಲ ರೀತಿಯ ಸಹಾಯ ಹಸ್ತ ನೀಡಿದಲ್ಲಿ ರಂಗಸಂಪದವು ಇನ್ನೂ ಒಳ್ಳೊಳ್ಳೆ ನಾಟಕಗಳನ್ನು ತಮ್ಮ ಮುಂದಿಡುತ್ತದೆ ಎಂದು ಹೇಳಿದರು.

ರಂಗಸಂಪದಕ್ಕೆ ಧನಸಹಾಯ ನೀಡಿ ಪ್ರೋತ್ಸಾಹಿಸಿದ ಮಹನೀಯರನ್ನು ಗೌರವಿಸಲಾಯಿತು. ನಿನಾಸಂ ವ್ಯವಸ್ಥಾಪಕರಾದ ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು. ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ಕಾರ್ಯದರ್ಶಿ ಪ್ರಸಾದ ಕಾರಜೋಶ, ಸಹಕಾರ್ಯದರ್ಶಿ ಯೋಗೇಶ ದೇಶಪಾಂಡೆ ವೇದಿಕೆ ಮೇಲಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button