ಪ್ರಗತಿವಾಹಿನಿ ಸುದ್ದಿ: ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ 28ನೇ ವಾರ್ಷಿಕ ಸರ್ವಸಾಧಾರಣ ಸಭೆಯು ದಿನಾಂಕ 14/09/2024 ರಂದು ಕನ್ನಡ ಭವನ ನೆಹರು ನಗರ ಬೆಳಗಾವಿಯಲ್ಲಿ ನೆರವೇರಿತು.
ಸಭೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ. ಪ್ರೀತಿ ದೊಡವಾಡ ಹಾಗೂ ಆಡಳಿತ ಮಂಡಳಿಯ ಸದಸ್ಯರಿಂದ ದೀಪ ಪ್ರಜ್ವಲಿಸುವ ಮುಖಾಂತರ ಸಭೆ ಪ್ರಾರಂಭವಾಯಿತು.
ನಂತರ ಅಧ್ಯಕ್ಷರಾದ ಪ್ರೀತಿ ದೊಡವಾಡ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಬ್ಯಾಂಕಿನ ೨೦೨೩-೨೦೨೪ ನೇ ಸಾಲಿನ ವಾರ್ಷಿಕ ವರದಿಯನ್ನು ಸಭಾಸದಸ್ಯರ ಮುಂದೆ ಪ್ರಸ್ತುತ ಪಡಿಸಿದರು. ಸಹಕಾರಿ ಬ್ಯಾಂಕ ಅಲ್ಪಾವಧಿಯಲ್ಲಿ ಸಾವಿರಾರು ಗ್ರಾಹಕರ ಮೆಚ್ಚುಗೆ ಗಳಿಸಿದೆ. ಇಂದಿನ ಕಾಲಮಾನಕ್ಕೆ ತಕ್ಕಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಬ್ಯಾಂಕಿನಲ್ಲಿ ನೀಡಲಾಗುತ್ತಿದೆ. ಬ್ಯಾಂಕಿನ ಎಲ್ಲ ಶಾಖೆಗಳು ಪ್ರಗತಿ ಪಥದಲ್ಲಿ ಮುನ್ನಡೆದಿವೆ ಎಂದು ತಿಳಿಸಿದರು.
ಬ್ಯಾಂಕಿನಲ್ಲಿ 375.80 ಕೋಟಿ ರೂ. ಠೇವಣಿ ಇದ್ದು, ಹಿಂದಿನ ವರ್ಷಗಳಿಗಿಂತ ಶೇ 5.57 ರಷ್ಟು ಪ್ರಗತಿಯನ್ನು ಸಾಧಿಸಿದೆ. ೨೩೬.೦೪ ಕೋಟಿ ಸಾಲ ನೀಡಲಾಗಿದೆ. ೭.೨೪ ಕೋಟಿ ರೂ ಲಾಭ ಗಳಿಸಿದೆ. ಬ್ಯಾಂಕಿನ ಸದಸೈರಿಗೆ ಶೇ.೧೫% ಡಿವಿಡೆಂಡ್ ನೀಡಲಾಗಿದೆ ಎಂದು ಘೋಷಿಸಿದರು
ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು, ವ್ಯವಸ್ಥಾಪನಾ ಮಂಡಳಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.ಉಪಾಧ್ಯಕ್ಷರಾದ ರೂಪಾ ಮುನವಳ್ಳಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ