Belagavi NewsBelgaum NewsEducationKarnataka NewsLatest

*ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗಮಕ ಕಾವ್ಯ ವ್ಯಾಖ್ಯಾನ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ; ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಿ. ಎಂ. ಉಷಾ ಮೇರು ಅಡಿಯಲ್ಲಿ ಗಮಕ ಕಾವ್ಯ ವ್ಯಾಖ್ಯಾನ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ೧೪ ಅಕ್ಟೋಬರ್ ೨೦೨೫ ರಂದು ಬೆಳಿಗ್ಗೆ ೧೦:೩೦ಕ್ಕೆ ಕುವೆಂಪು ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಡಾ. ವಿದುಷಿ ಶ್ಯಾಮಲಾ ಪ್ರಕಾಶ್, ಕರ್ನಾಟಕ ಸಂಗೀತ ಗಾಯಕಿ, ಬೆಂಗಳೂರು ಹಾಗೂ ಸಂತೋಷ ಎನ್. ಬಾರಧ್ವಾಜ್, ಖ್ಯಾತ ವ್ಯಾಖ್ಯಾನಕಾರರು, ಬೆಂಗಳೂರು ಇವರು ಗಮಕ ಕಾವ್ಯ ವ್ಯಾಖ್ಯಾನ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಸಿ. ಎಂ. ತ್ಯಾಗರಾಜ ಕುಲಪತಿಗಳು ರಾ.ಚ.ವಿ. ಬೆಳಗಾವಿ ಅವರು ವಹಿಸಲಿದ್ದಾರೆ. ರಾ.ಚ.ವಿ.ಯ ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ. ಎನ್. ಪಾಟೀಲ, ಹಣಕಾಸು ಅಧಿಕಾರಿಗಳು ಸ್ವಪ್ನ ಎಂ. ಎ. ಹಾಗೂ ಸಿಂಡಿಕೇಟ್ ಸದಸ್ಯರಾದ ಎಸ್. ಎ. ದೇಶಮುಖ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

Home add -Advt

ಈ ಕುರಿತು ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿದೆ.

Related Articles

Back to top button