Karnataka NewsLatest

ನ.18ರಿಂದ ವರ್ಗಾವಣೆ ಆರಂಭ: ತಕ್ಷಣ ಇವುಗಳನ್ನು ಸಿದ್ಧಪಡಿಸಿಕೊಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನವೆಂಬರ್ 18ರಿಂದ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಆರಂಭಗೊಳ್ಳಲಿದೆ ಎಂದು ತಿಳಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಕ್ಷಣ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಿದೆ.

ನ.4ರಂದು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದ್ದು, ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಮುಖ್ಯವಾಗಿ ವೈದ್ಯಕೀಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಇಇಡಿಎಸ್ ಶಿಕ್ಷಕರ ಮಾಹಿತಿ ತಿದ್ದುಪಡಿಗೆ ಉಪನಿರ್ದೇಶಕರ ಲಾಗಿನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರು ಒಂದೇ ಒಂದು ಸಲ ಅವರ ಮೊದಲ ಕೆಜಿಐಡಿ ನಂಬರ್ ನಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.

ವರ್ಗಾವಣೆ ಸಂದರ್ಭದಲ್ಲಿ ತಾಂತ್ರಿಕ ತೊಂದರೆಗಳಾದಲ್ಲಿ ಆಯುಕ್ತರ ಕಾರ್ಯಾಲಯದಿಂದ ಸರಿಪಡಿಸಲಾಗುವುದು. ಖಾಲಿ ಹುದ್ದೆಗಳ ಮಾಹಿತಿ ರಾಜ್ಯಮಟ್ಟದಲ್ಲಿ ಮಾತ್ರ ಲಭ್ಯವಾಗುತ್ತಿತ್ತು. ಆದರೆ ಈಗ ಉಪನಿರ್ದೇಶಕರ ಹಂತದಲ್ಲಿ ವೆರಿಫಿಕೇಶನ್ ಮತ್ತು ಅಪ್ ಡೇಶನ್ ಗಳಿಗೆ ಅವಕಾಶ ಕಲ್ಪಿಸಲಾಗುವುದು.

ಈ ಬಾರಿ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆ ಇರುವುದಿಲ್ಲ. ಬಡ್ತಿ, ವರ್ಗಾವಣೆ ಇನ್ನಿತರ ಕಾರಣಗಳಿೆದ ಖಾಲಿಯಾಗಿರುವಲ್ಲಿ ಇನ್ ಮತ್ತು ಔಟ್ ಮಾಡಲು ಉಪನಿರ್ದೇಶಕರ ಲಾಗಿನ್ ನಲ್ಲಿ ಅವಕಾಶ ನೀಡಲಾಗಿದೆ. ಸ್ಕೂಲ್ ವೈಸ್ ಡೈನಾಮಿಕ್ ರಿಪೋರ್ಟ್ ಸಿದ್ದಪಡಿಸಲು 2 ದಿನದಲ್ಲಿ ಅವಕಾಶ ಕಲ್ಪಿಸಲಾಗುವುದು. ವರ್ಗಾವಣೆಗೆ ಅರ್ಜಿ ಸಲ್ಲಿಸಲು ಸೂಕ್ತವಾದ ಸಮಯಾವವಕಾಶ ಕಲ್ಪಿಸಲಾಗುವುದು. ನಂತರ ಪರಿಶೀಲಿಸಿ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗುವುದು.

ಶಿಕ್ಷಣ ನಿರ್ದೇಶಕಿ ಮಮತಾ ನಾಯಕ, ವರ್ಗಾವಣೆ ಉಸ್ತುವರಿ ನಿರ್ದೇಶಕಿ ಲಲಿತಾ ಸಿರಿಯನ್ನವರ್, ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ ಮೊದಲಾದವರು ಇದ್ದರು.

ತೋಳ ಬಂತು ತೋಳ ಕಥೆಯಾಯ್ತು ಶಿಕ್ಷಕರ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button