*ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗೆ ಬಿಗ್ ಟ್ವಿಸ್ಟ್: ರನ್ಯಾ ಒಡೆತನದ ಕಂಪನಿಗೆ KIADBಯಿಂದ 12 ಎಕರೆ ಜಮೀನು ಮಂಜೂರು*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಣೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ರಾಜಕಾರಣಿಗಳ ಕೈವಾಡವೂ ಇದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ನಟಿ ರನ್ಯಾ ರಾವ್ ನಿರ್ದೇಶಕಿಯಾಗಿರುವ ಕ್ಸಿರೋಡಾ ಇಂಡಿಯಾ ಪರಿವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕಿಯಾಗಿದ್ದು, ಈ ಕಂಪನಿಗೆ ಕೆಐಎಡಿಬಿಯಿಂದ 12 ಎಕರೆ ಜಮೀನು ಮಂಜೂರಾಗಿದೆ.
ತುಮಕೂರು ಜಿಲ್ಲೆ ಶಿರಾ ಬಳಿಯ ಕ್ಸಿರೋಡಾ ಕಂಪನಿ ಇದ್ದು ಈ ಕಂಪನಿಗೆ ರನ್ಯಾ ರಾವ್ ಹಾಗೂ ರಷಬ್ ಇಬ್ಬರು ನಿರ್ದೇಶಕರಾಗಿದ್ದಾರೆ. 2023ರಲ್ಲಿ ಕೆಐಎಡಿಬಿಯಿಂದ ಈ ಕಂಪನಿಗೆ 12 ಎಕರೆ ಜಮೀನು ಮಜೂರಾಗಿದೆ. ಈ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. 2022ರ ಏಪ್ರಿಲ್ ನಲ್ಲಿ ಕಂಪನಿ ಆರಂಭವಾಗಿದ್ದು, ಕಂಪನಿ ಆರಂಭವಾದ ಕೇವಲ 9 ತಿಂಗಳಿಗೆ ಸರ್ಕಾರದಿಂದ ಭೂಮಿ ಮಂಜೂರಾಗಿದೆ. ಒಟ್ಟಾರೆ ಪ್ರಕರಣದ ಹಿಂದೆ ರಾಜಕಾರಣಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ