
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗೋಕಾಕ ಪಟ್ಟಣದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಸವರಾಜ ರಾಮಣ್ಣ ಕರಿಯಪ್ಪಗೋಳ್ ಬಂಧಿತ ಆರೋಪಿ.


ಈಗಾಗಲೇ ಹಲವು ಚೈನ್ ಸ್ನಾಚಿಂಗ್ ಹಾಗೂ ಮನೆ ಕಳ್ಳತನ ಪ್ರಕರಣ ಬೇದಿಸಿರುವ ಈ ತಂಡ ಆಗಸ್ಟ್ ತಿಂಗಳಲ್ಲಿ ನಗರದಿಂದ ಕಡಬಗಟ್ಟಿ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆಯ ಮಂಗಳಸೂತ್ರ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿದೆ.
ನಗರದ ಮಹಾಲಕ್ಷ್ಮೀ ದೇವಸ್ಥಾನದ ಮುಂದೆ ಅನುಮಾನಸ್ಫದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಿಚಾರಣೆ ನಡೆಸಿದಾಗ ಈ ಪ್ರಕರಣ ತಾನೆ ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ 40 ಗ್ರಾಂ ತೂಕದ, 2.04 ಲಕ್ಷ ರೂ. ಮೌಲ್ಯದ ಮಂಗಳಸೂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಗೋಕಾಕ ಶಹರ ಠಾಣೆಯ ಪಿ.ಎಸ್.ಐ ಎಮ್.ಡಿ.ಘೋರಿ ಸಿಬ್ಬಂಧಿಗಳಾದ ಆರ್ ಬಿ ಹಡಪದ, ಬಿ. ವಿ ನೇರ್ಲಿ, ಸುರೇಶ ಈರಗಾರ, ಯಲ್ಲಪ್ಪ ಗಿಡಗಿರಿ, ಸಚೀನ ಹಾಲಪ್ಪಗೋಳ, ವಿಠಲ ನಾಯಕ,
ರಮೇಶ ಮುರನಾಳೆ ಭಾಗವಹಿಸಿದ್ದಾರೆ.
ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈ ತಂಡದ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯವರು ಶ್ಲಾಘಿಸಿದ್ದಾರೆ.
*ನಂದಗಡದಲ್ಲಿ ಕಳ್ಳರ ಬಂಧನ*

https://pragati.taskdun.com/latest/fsl-officershrutisuicidebangalore/