
ಪ್ರಗತಿವಾಹಿನಿ ಸುದ್ದಿ: ಪೆರೋಲ್ ಮೇಲೆ ಹೊರಬಂದಿದ್ದ 36 ವರ್ಷದ ಅತ್ಯಾಚಾರ ಆರೋಪಿ ತನ್ನ 11 ವರ್ಷದ ಸ್ವಂತ ಮಗಳು ಮತ್ತು 12 ವರ್ಷದ ಸೊಸೆಯ ಮೇಲೆ ಅತ್ಯಾಚಾರವೆಸಗಿ ಹೀನ ಕೃತ್ಯವೆಸಗಿದ್ದಾನೆ. ಈ ಘಟನೆ ಛತ್ತೀಸ್‌ಗಢನ ಕೊರಿಯಾ ಜಿಲ್ಲೆಯಲ್ಲಿ ನಡೆಸಿದೆ
ಈ ಆರೋಪಿಗೆ ಈಗಾಗಲೇ ಕ್ರಿಮಿನಲ್ ಹಿನ್ನಲೆಯಿದ್ದು, ಈ ಹಿಂದೆಯೂ ಅತ್ಯಾಚಾರ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಹಾಗೂ ಈತನ ವಿರುದ್ಧ ರೌಡಿ ಶೀಟರ್ ಕೂಡ ಓಪನ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದ ಈತ ಅಕ್ಟೋಬರ್ 19 ರಂದು ಪೆರೋಲ್ ಮೇಲೆ ಹೊರಬಂದವನೇ, ಮನೆಯಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಈತನ ಮಗಳು ಮಗಳು ಪೊಲೀಸರಿಗೆ ತಿಳಿಸಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ