Kannada NewsKarnataka NewsLatest

ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಗರ್ಭಪಾತ ಮಾಡಿದ ಡಾಕ್ಟರ್ ಸೇರಿ ನಾಲ್ವರ ವಿರುದ್ಧ ಕೇಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭ ಧರಿಸಲು ಕಾರಣನಾದ ವ್ಯಕ್ತಿ, ಗರ್ಭಪಾತ ಮಾಡಿದ ವೈದ್ಯ, ಗರ್ಭಪಾತ ಮಾಡಿಸಿದ ಬಾಲಕಿಯ ತಾಯಿ ಮತ್ತು ಅದಕ್ಕೆ ನೆರವಾದ ವ್ಯಕ್ತಿಯ ಮೇಲೆ ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗೋಕಾಕ ತಾಲೂಕಿನ ಹಳ್ಳಿಯೊಂದರ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಆಕೆ ಗರ್ಭ ಧರಿಸಿದಾಗ ಆಕೆಯ ತಾಯಿ ಮತ್ತು ಆರೋಪಿಯ ದೊಡ್ಡಪ್ಪ ಸೇರಿ ಬಾಲಕಿಯನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದರು. 

ಇದೀಗ ಅತ್ಯಾಚಾರ ಮಾಡಿ ಆರೋಪಿ ಅಡಿವೆಪ್ಪ ಪೂಜೇರಿ, ಆತನ ದೊಡ್ಡಪ್ಪ ರಂಗಪ್ಪ ಪೂಜೇರಿ, ಗೋಕಾಕದ ವೈದ್ಯ ಡಾ.ಕಡಲಗಿಕರ್ ಹಾಗೂ ಬಾಲಕಿಯ ತಾಯಿಯ ವಿರುದ್ಧ ಬಾಲಕಿ ಪ್ರಕರಣ ದಾಖಲಿಸಿದ್ದಾಳೆ.

Home add -Advt

ಬಾಲಕಿಯನ್ನು ಸಂಬಂಧಿಕರು ಬೆಳಗಾವಿಗೆ ಕರೆತಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಕ್ಕಳ ಸಹಾಯವಾಣಿ ಘಟಕಕ್ಕೆ ಸೇರಿಸಲಾಗಿದೆ.

(ಬಾಲಕಿಯ ಹೆಸರು, ಊರು, ತಾಯಿಯ ಹೆಸರು ಗೌಪ್ಯವಾಗಿಡಲಾಗಿದೆ)

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button