Film & EntertainmentKannada NewsKarnataka NewsLatest

*ಮದುವೆ ಆಗು ಪ್ಲೀಸ್ ಎಂದು ವಿಜಯ್ ದೇವರಕೊಂಡ ಬಳಿ 100 ಬಾರಿ ಕೇಳಿಕೊಂಡಿದ್ದ ರಶ್ಮಿಕಾ ಮಂದಣ್ಣ*

ಪ್ರಗತಿವಾಹಿನಿ ಸುದ್ದಿ: ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಪ್ರೀತಿ ಹಾಗೂ ಮದುವೆಯ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ವಿಜಯ್, ತಾವು ರಶ್ಮಿಕಾ ಬಳಿ ಮದುವೆಯ ಬಗ್ಗೆ ನೂರು ಬಾರಿ ಪ್ರಸ್ತಾಪಿಸಲು ಹೇಳಿದ್ದೇಕೆ ಎಂಬುದರ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.

ವಿಜಯ್ ದೇವರಕೊಂಡ ಆರಂಭದಲ್ಲಿ ಪ್ರೀತಿ ಮತ್ತು ಮದುವೆಯ ಬಗ್ಗೆ ವಿಭಿನ್ನ ನಿಲುವು ಹೊಂದಿದ್ದರು. ವೃತ್ತಿಜೀವನ ಮತ್ತು ಮಹತ್ವಾಕಾಂಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ವಿಜಯ್, ಪ್ರೀತಿಯನ್ನು ಅಷ್ಟಾಗಿ ನಂಬುತ್ತಿರಲಿಲ್ಲ. ಆದರೆ ಕಾಲಕ್ರಮೇಣ ರಶ್ಮಿಕಾ ಜೊತೆಗಿನ ಒಡನಾಟ ಪ್ರೀತಿಯಾಗಿ ಬದಲಾಗಿದ್ದು, ಆಕೆಯ ಜೊತೆಗಿದ್ದಾಗ ಸಿಗುವ ನೆಮ್ಮದಿ ಮತ್ತು ಸಮಾಧಾನವೇ ಜೀವನದ ದೊಡ್ಡ ಸಂತೋಷ ಎಂದು ವಿಜಯ್ ಹಂಚಿಕೊಂಡಿದ್ದಾರೆ.

ಮದುವೆಯಂತಹ ಮಹತ್ವದ ನಿರ್ಧಾರವನ್ನು ಭಾವನಾತ್ಮಕ ಆವೇಶದಲ್ಲಿ ಅಥವಾ ಆತುರದಲ್ಲಿ ತೆಗೆದುಕೊಳ್ಳಬಾರದು ಎಂಬುದು ವಿಜಯ್ ಅಭಿಪ್ರಾಯವಾಗಿತ್ತು. ಜೀವನದ ಏಳುಬೀಳುಗಳು, ಸುಖ-ದುಃಖಗಳು ಮತ್ತು ಸವಾಲುಗಳನ್ನು ಎದುರಿಸಿದ ಬಳಿಕವೂ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸಿದ್ದರು. ಇದೇ ಕಾರಣಕ್ಕೆ ರಶ್ಮಿಕಾ ಜೊತೆ ಒಂದು ವರ್ಷ ಕಾಲ ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದು, ಸುಮಾರು 100 ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ವಿಜಯ್ ಅವರ ಈ ನಡೆಗೆ ರಶ್ಮಿಕಾ ಬೇಸರ ಮಾಡಿಕೊಂಡಿರಲಿಲ್ಲ. ವಿಜಯ್ ಅವರ ಹಿಂದಿನ ನೋವುಗಳು ಮತ್ತು ಸೂಕ್ಷ್ಮ ಸ್ವಭಾವವನ್ನು ಅರ್ಥಮಾಡಿಕೊಂಡಿದ್ದ ರಶ್ಮಿಕಾ, ಸಂಬಂಧದ ಭವಿಷ್ಯದ ಬಗ್ಗೆ ಖಚಿತತೆ ಪಡೆಯಲು ವಿಜಯ್ ಈ ರೀತಿ ಯೋಚಿಸುತ್ತಿದ್ದಾರೆ ಎಂಬುದನ್ನು ಮನಗಂಡಿದ್ದರು. ಬಳಿಕ ಇಬ್ಬರೂ ಕುಟುಂಬದ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಎಂಬ ಮಾಹಿತಿ ಹಂಚಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಮದುವೆಯ ಕುರಿತು ಇಬ್ಬರೂ ಹಂಚಿಕೊಂಡ ವಿಚಾರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಕೆಲವರು ಈ ಜೋಡಿಯ ನಿರ್ಧಾರವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಸಂಬಂಧದ ಭವಿಷ್ಯದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. “ಈ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ” ಎಂಬ ರೀತಿಯ ಕಾಮೆಂಟ್‌ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button