National

*ರತನ್ ಟಾಟಾ ಸ್ಥಿತಿ ಗಂಭೀರ: ಐಸಿಯುಗೆ ಶಿಫ್ಟ್*

ಪ್ರಗತಿವಾಹಿನಿ ಸುದ್ದಿ : ಭಾರತದ ಅತಿದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಎಮೆರಿಟಸ್‌ ಅಧ್ಯಕ್ಷ ರತನ್ ಟಾಟಾ ಅವರು ಮುಂಬೈ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

86 ವರ್ಷದ ರತನ್ ಟಾಟಾ ಅವರು ಅಕ್ಟೋಬರ್ 7ರ ಸೋಮವಾರದಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ತಮ್ಮ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣ ವಾಡಿಕೆಯ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾಗಿ ಹೇಳಿದ್ದರು.

ಆದರೆ ರತನ್ ಟಾಟಾ ಅವರ ಆಪ್ತರೊಬ್ಬರು ಇಂದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ರತನ್ ಟಾಟಾ ಕೇವಲ ಉದ್ಯಮಿಯಾಗಿ ಮಾತ್ರವಲ್ಲ, ಅವರ ಟ್ರಸ್ಟ್ ಗಳ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರು ತಮ್ಮ ಸರಳತೆ ಹಾಗೂ ಪರೋಪಕಾರಕ್ಕಾಗಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

Home add -Advt

Related Articles

Back to top button