Latest

ಮೊಬೈಲ್ ಫೋನ್ ಗೆ ಸಾರ್ವಜನಿಕ ಚಾರ್ಜರ್ ಬಳಸುತ್ತಿದ್ದೀರಾ?: ಜ್ಯೂಸ್ ಜಾಕಿಂಗ್ ಗೆ ಒಳಗಾಗಬಹುದು ಎಚ್ಚರ !

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಾರ್ವಜನಿಕ ಚಾರ್ಜರ್‌ಗಳ ಮೂಲಕ ನಿಮ್ಮ ಫೋನ್‌ಗಳನ್ನು ಚಾರ್ಜ್ ಮಾಡುವುದು ದೊಡ್ಡ ಅಪಾಯ ಸೃಷ್ಟಿಸಿಕೊಳ್ಳುವ ಮಾರ್ಗವಾಗಿದೆ ಎಂಬ ಆತಂಕಕಾರಿ ವಿಷಯವೊಂದನ್ನು FBI ಬಹಿರಂಗಪಡಿಸಿದೆ.

ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಅಥವಾ ಶಾಪಿಂಗ್ ಕೇಂದ್ರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿನ ಉಚಿತ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಜನರು ತಮ್ಮ ಫೋನ್‌ಗಳನ್ನು ಚಾರ್ಜ್ ಮಾಡದಂತೆ ಅದು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಮಾಡಿದ್ದೇ ಆದಲ್ಲಿ ಜ್ಯೂಸ್ ಜಾಕಿಂಗ್ ಗೆ ಒಳಪಡುವ ಎಲ್ಲ ಸಾಧ್ಯತೆಗಳೂ ಇರುವುದಾಗಿ ತಿಳಿಸಿದೆ.

ಏನಿದು ಜ್ಯೂಸ್ ಜಾಕಿಂಗ್?:

ಸಾರ್ವಜನಿಕ ಚಾರ್ಜರ್‌ಗಳು ಹ್ಯಾಕರ್‌ಗಳ ಸ್ವರ್ಗವಾಗಿ ಮಾರ್ಪಟ್ಟಿವೆ. ಇದು ಗೌಪ್ಯ ಡೇಟಾವನ್ನು ಮತ್ತು ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಕದಿಯುವ ಕ್ರಿಮಿನಲ್ ಗಳು ಬಳಸುವ ಮಾಲ್‌ವೇರ್‌ ಗಳ ಜೊತೆ ಮೊಬೈಲ್ ಸುಲಭವಾಗಿ ಸಂಪರ್ಕ ಹೊಂದಲು ಅವಕಾಶ ಮಾಡಿಕೊಡುತ್ತದೆ. ಇದನ್ನೇ ಜ್ಯೂಸ್ ಜಾಕಿಂಗ್ ಎಂದು ಕರೆಯಲಾಗುತ್ತದೆ ಎಂದು FBI ತಿಳಿಸಿದೆ.

Home add -Advt

ಇತ್ತೀಚಿನ ಕೆಲವು ಘಟನೆಗಳು ಈ ಚಾರ್ಜಿಂಗ್ ಸ್ಟೇಷನ್‌ಗಳಿಂದ ಉಂಟಾಗುವ ಅಪಾಯವನ್ನು ದೃಢಪಡಿಸಿವೆ. ಹೀಗಾಗಿ FBI ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯತೆಯಿದೆ.

ಈ ರೀತಿಯ ಹ್ಯಾಕಿಂಗ್‌ಗೆ ಬಲಿಯಾಗುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಕೇಬಲ್ ಸೇರಿದಂತೆ ನಿಮ್ಮ ಸ್ವಂತ ಚಾರ್ಜರ್ ಜೊತೆಯಲ್ಲಿ ಒಯ್ಯುವುದು ಎಂಬ ಅಭಿಪ್ರಾಯವನ್ನು FBI ವ್ಯಕ್ತಪಡಿಸಿದೆ.

https://pragati.taskdun.com/karnatakaheavy-rainappril-15th/
https://pragati.taskdun.com/arrested-for-threatening-to-kill-maharashtra-cm-shinde-while-drunk/

https://pragati.taskdun.com/ias-officer-dr-akashdowry-harassmentfir-filedwife/

Related Articles

Back to top button