
ಪ್ರಗತಿವಾಹಿನಿ ಸುದ್ದಿ: ನೂತನವಾಗಿ ಅಧಿಕಾರ ಸ್ವೀಕರಿಸಿರುವ ಬೆಳಗಾವಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ನಾಯಕ್ ಅವರು ವಿವಿಧ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಾವಿ ಸದಾಶಿವ ನಗರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾಹಿತಿ ನೀಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ರೇಷನ್ ಕಾರ್ಡ್ ಇದ್ದವರು ಯಾರು ಇ ಕೆ ವೈಸಿ ಮಾಡಿಸಿಲ್ಲ ಅವರು ಇದೆ ತಿಂಗಳು ಒಳಗಡೆ ಮಾಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನ್ಯಾಯ ಬೆಲೆ ಅಂಗಡಿಗಳನ್ನು ತೆರೆದು ಜನರಿಗೆ ತೊಂದರೆ ಆಗದಂತೆ ರೇಷನ್ ವಿತರಣೆ ಮಾಡಲು ಸೂಚಿಸಲಾಗಿದೆ
ಸರ್ಕಾರಿ ನೌಕರರಿದ್ದು ಅಕ್ಕಿ ತೆಗೆದುಕೊಳ್ಳುತ್ತಿದ್ದರೆ ಮಾಹಿತಿ ಕೇಳಿದ್ದೇವೆ. ಅಂತವರು ಯಾರಾದರು ಕಂಡು ಬಂದರೆ ದಂಡ ಹಾಕಿ ಕಾರ್ಡ್ ರದ್ದು ಪಡಿಸುತ್ತೇವೆ. ರೇಷನ್ ಕಾರ್ಡ್ ಇದ್ದವರು ಎಲ್ಲಿಬೇಕಾದರು ರೇಷನ್ ತಗೆದುಕೊಳ್ಳಬಹುದು. ನ್ಯಾಯಬೆಲೆ ಅಂಗಡಿ ಮಾಲೀಕರು ತಡಮಾಡದೆ ಜನರಿಗೆ ಅಕ್ಕಿ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ