ಪ್ರಗತಿವಾಹಿನಿ ಸುದ್ದಿ; ಶಿರಸಿ: ಕಾಂತಾವರ ಕನ್ನಡ ಸಂಘ ನೀಡುವ ರಾಜ್ಯ ಮಟ್ಟದ ಪಾ.ವೆಂ.ಆಚಾರ್ಯ ಹೆಸರಿನ ಪ್ರಥಮ ಮಾಧ್ಯಮ ಪ್ರಶಸ್ತಿ ಹಿರಿಯ ಪತ್ರಕರ್ತ, ಪ್ರಜಾವಾಣಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು.
ಮಾಧ್ಯಮ ಕ್ಷೇತ್ರದಲ್ಲಿ ಅನವರತ ಸಾಧನೆ ಮಾಡಿದ, ತಮ್ಮ ಬರಹದ ಮೂಲಕ ಕ್ಷೇತ್ರದಲ್ಲಿ ಅಪರಿಮಿತ ಛಾಪು ಮೂಡಿಸಿದ ರವೀಂದ್ರ ಭಟ್ಟ ಅವರಿಗೆ ಕಾಂತಾವರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ರವೀಂದ್ರ ಭಟ್ಟ ಅವರು ತಮಗೆ ನೀಡಿದ ಪ್ರಶಸ್ತಿ ಮೊತ್ತ 12 ಸಾವಿರ ರೂ.ಯನ್ನು ಸಂಘಕ್ಕೇ ದೇಣಿಗೆಯಾಗಿ ನೀಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಾಗ್ಮಿ ಎಸ್.ಎನ್.ಸೇತುರಾಮ್, ಕನ್ನಡ ಸಂಘದ ಅಧ್ಯಕ್ ಡಾ. ನಾ ಮೊಗಸಾಲೆ, ಹರಿಕೃಷ್ಣ ಪುನರೂರು, ಟಿಎಎನ್ ಖಂಡಿಗೆ, ಸದಾನಂದ ನಾರವಿ, ಮಹಾವೀರ ಪಾಂಡಿ, ಸತೀಶ ಕುಮಾರ ಇತರರು ಇದ್ದರು.
ಸಾಧಕರಾದ ಬೇಳೂರು ರಘುನಂದನ, ತಾರಿಣಿ ಶುಭದಾಯಿನಿ, ಅವರನ್ನೂ ಗೌರವಿಸಲಾಯಿತು. ಬಳಿಕ ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದಿಂದ ತಾಳಮದ್ದಲೆ ಕೂಡ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ