Kannada NewsKarnataka News

ರವಿಶರಣ್ ಭಟ್ ಅಪಹರಣ ಪ್ರಕರಣ: ಬೆಳಗಾವಿಯ 8 ಜನರ ಬಂಧನ; ಪ್ರಮುಖ ಆರೋಪಿಗಳಿಗಾಗಿ ಶೋಧ; ಕ್ರಿಫ್ಟೋ ಕರೆನ್ಸಿ ದಂಧೆ ಕಾರಣವೇ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಿಂದ ಅಪಹರಣಕ್ಕೊಳಗಾಗಿದ್ದ ಹುಬ್ಬಳ್ಳಿಯ ಉದ್ಯಮಿ (ಯಲ್ಲಾಪುರ ಮೂಲ) ರವಿಶರಣ ನಾಗೇಂದ್ರ ಭಟ್ ಅಪಹರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಿಗಾಗಿ ಶೋಧ ನಡೆದಿದೆ.

ಬೆಳಗಾವಿಯ ಕೆಎಫ್ ಡಿ ಶೋ ರೂಂ ಬಳಿಯಿಂದ ರವಿಶರಣ ಭಟ್ ಅವರನ್ನು ಅಪಹರಿಸಲಾಗಿತ್ತು.  ರಿವಾಲ್ಟರ್ ಹಿಡಿದು ಹಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು.

ರವಿ ಶರಣ ಭಟ್ ಖಾನಾಪುರ ಬಳಿಯ ಫಾರ್ಮ್ ಹೌಸ್ ಒಂದರಿಂದ ಅಪಹರಣಕಾರರಿದೆ ತಪ್ಪಿಸಿಕೊಂಡು ಬಂದು ಎಪಿಎಂಸಿ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದರು.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಿನಾಂಕ:18/01/2022 ರಂದು ಮೊಕದ್ದಮೆ (ಸಂಖ್ಯೆ:12 2022 ಕಲಂ 307, 342, 364(ಎ), 395 ಐಪಿಸಿ ಮತ್ತು ಕಲಂ 25(ಎ)) ಭಾರತೀಯ ಆಯುಧ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಉಪ ಪೊಲೀಸ್‌ ಆಯುಕ್ತರು (ಕಾಸು) ರವರ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಪ್ರಕರಣ ತನಿಖೆ ಕೈಕೊಂಡು, 3 ದಿನದೊಳಗಾಗಿ   ಆರೋಪಿತರಾದ,

1) ಬದ್ರುದ್ದೀನ ಆಯುಬ್ ಮುಲ್ಲಾ, ವಯಸ್ಸು: 30, ಸಾ ನ್ಯೂ ಗಾಂಧಿನಗರ

2) ನೂರ್ ಅಹ್ಮದ ಅಲಿಯಾಸ್ ರಾಜು ಮಹಮ್ಮದಅಅ ಕಲ್ಲೂರ, ವಯಸ್ಸು: 30, ಸಾನ್ಯೂ ಗಾಂಧಿನಗರ

3) ರಹಾನ ರಿಯಾಹ್ ಸಯ್ಯದ, ವಯಸ್ಸು : 35, ಸಾರವಿವಾರ ಪೇಟ್ ಖಾನಾಪೂರ

 ಬೆಳಗಾವಿಯಲ್ಲಿ ಹಾಗೂ ಗೋವಾಕ್ಕೆ ಹೋಗಿ ತಲೆಮರೆಸಿಕೊಂಡಿದ್ದ,

1) ಕಶ್ಮೀರ ಅಸೂಲ್ ಆಸೀಮ, ಖಾಜಿ ವಯಸ್ಸು:27, ಸಾರೇಲ್ ನಗರ ಬೆಳಗಾವಿ.

2) ಆರೀಪ್ ಇಬ್ರಾಹಿಂ ಮುಲ್ಲಾ, ವಯಸ್ಸು:27, ಸಾಆಹಾದ ನಗರ ಬೆಳಗಾವಿ.

3) ಯಾಹೀಯಾ ಹಾಕ್ರೀಯಾ ಕಟಗೇರಿ, ವಯಸ್ಸು : 23, ಸಾ|ಜಾಂಬೋಟ ರೋಡ್, ಪೀರನವಾಡಿ

4) ಜುಬೇರ್ ರಷೀದ್ ಪೀರಹಾದ, ವಯಸ್ಸು: 27 ಸಾದೇಶಪಾಂಡ ಗಲ್ಲಿ ಬೆಳಗಾವಿ.

5) ನಾಸೀಪ್ ನವಾಜ್‌ಖಾನ್ ಪಠಾಣ, ವಯಸ್ಸು: 23 ಸಾಕಾಕೇರಿಗಲ್ಲ ಬೆಳಗಾವಿ,

ಇವರನ್ನು ಗೋವಾದಿಂದ ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳದ ಆರೋಪಿತರ ಪತ್ತೆಗಾಗಿ ಕ್ರಮ ಕೈಕೊಳ್ಳಲಾಗಿದೆ.

ಕ್ರಿಫ್ಟೋ ಕರೆನ್ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ನಡೆದಿದೆ ಎನ್ನಲಾಗುತ್ತಿದ್ದು, ಪ್ರಮುಖ ಆರೋಪಿಗಳ ಪತ್ತೆಯಾದ ನಂತರ ಸಂಪೂರ್ಣ ವಿವರ ಗೊತ್ತಾಗಲಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮತ್ತೆ ಮೂವರ ಬಲಿ, ನಿಲ್ಲದ ಕೊರೋನಾ ಓಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button