Latest

ರಾಯಬಾಗದ ಎಲ್ಲಾ ದೇವಸ್ಥಾನಗಳಲ್ಲಿ ಅಗ್ನಿಹೋತ್ರ

ಪ್ರಗತಿವಾಹಿನಿ ಸುದ್ದಿ; ರಾಯಬಾಗ: ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ರಾಯಬಾಗದ ತಮ್ಮ ಶಾಖಾಮಠದಲ್ಲಿ ರಾಯಬಾಗದ 20 ದೇವಸ್ಥಾನಗಳಲ್ಲಿ ಅಗ್ನಿಹೋತ್ರವನ್ನು ಮಾಡಲು ಆದೇಶಿಸಿ ಅಗ್ನಿಹೋತ್ರದ ಮಾಹಿತಿ ನೀಡಿ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಇಂದು ವಾತಾವರಣ ಕಲುಷಿತವಾಗಿದೆ ಜನ ಭಯಭೀತರಾಗಿದ್ದಾರೆ ಈ ಸಂದರ್ಭದಲ್ಲಿ ನಾವೆಲ್ಲರೂ ಕೂಡಾ ಧೈರ್ಯದಿಂದ ಇರಬೇಕು ಅಗ್ನಿಹೋತ್ರವನ್ನು ಮಾಡುವುದರಿಂದ ಪ್ರಕೃತಿ ಶುದ್ಧವಾಗುತ್ತದೆ. ಕೋರಾನದಿಂದಲೂ ಕೂಡ ಮುಕ್ತಿಯನ್ನು ಪಡೆಯಬಹುದು ಎಂದು ಹೇಳಿದರು.

ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ನವರು ಕೂಡ ಇದರ ಬಗ್ಗೆ ಆಸಕ್ತಿಯನ್ನು ವಹಿಸಿದ್ದಾರೆ. ಹಾಗೆಯೇ ಮುಜರಾಯಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಕೂಡ ಆಸಕ್ತಿಯನ್ನು ವಹಿಸಿರುವುದು ಅಭಿಮಾನದ ಸಂಗತಿ ಎಂದರು.

ರಾಯಭಾಗದ ಶಾಸಕರಾದ ದುರ್ಯೋಧನ ಐಹೊಳೆ ಅವರು ನಮ್ಮ ಕ್ಷೇತ್ರದಲ್ಲಿಯೂ ಈ ಕಾರ್ಯವಾಗುತ್ತಿರುವುದು ಸಂತಸ ಎಂದರು.

ಬಿಜೆಪಿಯ ಯುವ ಧುರಿಣ ಅರುಣ್ ಐಹೊಳೆ ಅವರು ಮಾತನಾಡಿ ಹುಕ್ಕೇರಿ ಶ್ರೀಗಳು ಎಂದರೆ ಸಾಮಾಜಿಕ ವ್ಯವಸ್ಥೆಗೆ ಸ್ಪಂದಿಸುವಂತವರು ಈಗಾಗಲೇ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಗುಬ್ಬಿಗೂಡುಗಳ ವಿತರಣೆ ಮತ್ತು ಅನೇಕ ಸಾಮಾಜಿಕ ಕಾರ್ಯವನ್ನು ಮಾಡುವುದರ ಜೊತೆ ಜೊತೆಗೆ ಜನರಿಗೆ ಅನುಕೂಲವಾಗುವ ಅಗ್ನಿಹೋತ್ರವನ್ನು ನಮ್ಮ ನಗರದಲ್ಲಿ ಕೂಡ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಅಗ್ನಿಹೊತ್ರ ಪರಿಕರದ ಸೇವೆಯನ್ನು ರಾಯಬಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲರವರು ಬೆಂಗಳೂರು ನಗರದ ಪಂಕಜಾ ಮಂಜುನಾಥ ಅವರು ಅಗ್ನಿಹೋತ್ರ ಪರಿಕರವನ್ನು ನೀಡಿ ಈ ಕಾರ್ಯಕ್ಕೆ ಸ್ಪಂದಿಸಿರುವುದು ಅಭಿಮಾನದ ಸಂಗತಿ ಎಂದರು. ಈ ಸಂದರ್ಭದಲ್ಲಿ ರವಿ ರಂಗೊಳಿ ಎಸ್ ಎಸ್ ಕಾಂಬಳೆ, ಬಿ ಬಿ ಪೂಜಾರ, ವಿವೇಕಯಮಕನರ, ಮಲ್ಲಪ್ಪ ಅವಳೆ, ಮಾಯಪ್ಪಾಕಿಚಡೆ ಇಮಾಮ್ ಪಠಾಣ್ ಇನ್ನೂ ಅನೇಕರು ಉಪಸ್ಥಿತರಿದ್ದರು.

ಖಾಸಗಿ ಲ್ಯಾಬ್ ಗಳ ವಸೂಲಿಗೆ ಕಡಿವಾಣ; ಸಿಟಿ ಸ್ಕ್ಯಾನ್ ಗೆ ದರ ನಿಗದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button