Latest

ರೆಪೋ ದರ ಹೆಚ್ಚಳ; RBI ಹಣಕಾಸು ನೀತಿ ಪ್ರಕಟ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, ಈ ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಈ ಬಾರಿ ರೆಪೋ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ಪರಿಷ್ಕೃತ ರೆಪೋ ದರ ಶೇ.6.25 ಆಗಿದೆ ಎಂದು ತಿಳಿಸಿದರು.

ರೆಪೋ ದರ ಈವರೆಗೆ ಶೇ.5.90ರಷ್ಟಿತ್ತು. ಈಗ ಶೇ.6.25ಕ್ಕೆ ಏರಿಕೆ ಮಾಡಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು.

ರೆಪೋ ದರ ಹೆಚ್ಚಳದ ಪರಿಣಾಮ ವಾಹನ, ಗೃಹ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ, ಇಎಂಐ ಇನ್ನಷ್ಟು ದುಬಾರಿಯಾಗಲಿದೆ. ಸತತ ಐದನೇ ಬಾರಿಗೆ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಂತಾಗಿದೆ.

Home add -Advt

ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯಿಂದಾಗಿ ಆಹಾರ ಕೊರತೆ, ಅತಿಯಾದ ಇಂಧನ ದರ ಬಡ ಜನತೆ ಮೇಲೆ ಪರಿಣಾಮ ಬೀರುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಜಾಗತಿಕ ಹಣದುಬ್ಬರ ಏರಿಕೆಯಾಗಿದೆ. ಆದರೆ ಭಾರತದ ಆರ್ಥಿಕತೆ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಶಿವಸೇನೆ ಬಳಿಕ MNS ಪುಂಡಾಟ; KSRTC ಬಸ್ ಗಳ ಮೇಲೆ ದಾಳಿ

https://pragati.taskdun.com/karnataka-maharastra-border-issueksrtc-busmnsshivasene/

Related Articles

Back to top button