ಪ್ರಗತಿವಾಹಿನಿ ಸುದ್ದಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾ ಸ್ಥಿತಿಯನ್ನು ಮುಂದುವರೆಸಿದೆ.
ಆರ್ ಬಿಐ ಮತ್ತೊಮ್ಮೆ ರೆಪೊ ದರವನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಲು ನಿರ್ಧರಿಸಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಶಕ್ತಿಕಾಂತ್ ದಾಸ್ ನೇತೃತ್ವದ ಆರ್ ಬಿಐ ಹಣಕಾಸು ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಆರ್ ಬಿಐ ರೆಪೊ ದರವನ್ನು ಶೇ.6.5ಕ್ಕೆ ಉಳಿಸಿಕೊಂಡಿದೆ. ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಸತತ 11ನೇ ಬಾರಿಯೂ ರೆಪೊ ದರ ಶೇ.6.5ರಲ್ಲಿ ಬದಲಾವಣೆಯಾಗದೇ ಮುಂದುವರೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ