Film & EntertainmentKannada NewsKarnataka NewsLatest

*ಇದೆಂತಹ ಆರೋಪ…. ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್*

ಸಿಟ್ಟಿಗೆದ್ದ ಅಪ್ಪು ಫ್ಯಾನ್ಸ್ ದೂರು ದಾಖಲಿಸಲು ನಿರ್ಧಾರ

ಪ್ರಗತಿವಾಹಿನಿ ಸುದ್ದಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ನಟ ದರ್ಶನ್ ಅಭಿಮಾನಿ ಹೆಸರಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದ್ದು, ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಆರ್ ಸಿಬಿ ತಂಡ ಈ ಬಾರಿ ಐಪಿಎಲ್ ನಲ್ಲಿ ಸೋಲುವ ಸಾಧ್ಯತೆ ಇದ್ದು, ಈಗಾಗಲೇ ಮೂರು ಪಂದ್ಯ ಸೋತಿದ್ದು ಒಂದರಲ್ಲಿ ಮಾತ್ರ ಗೆಲುವು ಪಡೆದಿದೆ. ಆರ್ ಸಿಬಿ ಸೋಲಿಗೆ ಮ್ಯಾನೇಜ್ ಮೆಂಟ್ ಕಾರಣ ಎಂದು ಕೆಲವರು ದೂರಿದರೆ ಇನ್ನು ಕೆಲವರು ತಂಡದ ಪರ್ಫಾರ್ಮೆನ್ಸ್ ಸರಿಯಿಲ್ಲದಿರುವುದೇ ಕಾರಣ ಎಂದಿದ್ದಾರೆ, ಆದರೆ ನಟ ದರ್ಶನ್ ಫ್ಯಾನ್ಸ್ ಮಾತ್ರ ತುಂಬಾ ಕೀಳುಮಟ್ಟದಲ್ಲಿ ಆರೋಪ ಮಾಡಿದ್ದಾರೆ. ಆರ್ ಸಿಬಿ ಸೋಲುತ್ತಿರಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರಣ ಎಂದು ದೂರಿದ್ದಾರೆ.

ಆರ್ ಸಿಬಿ ಅನ್ ಬಾಕ್ಸಿಂಗ್ ಇವೆಂಟ್ ಗೆ ಅಶ್ವಿನಿ ಕೂಡ ಆಗಮಿಸಿದ್ದರು. ’ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದೇ ಕಾರಣಕ್ಕೆ ಆರ್ ಸಿಬಿ ಸೋಲುತ್ತಿದೆ’ ಎಂದು ದರ್ಶನ್ ಅಭಿಮಾನಿಗಳ ಗಜಪಡೆ ಎಂಬ ಹೆಸರಿನ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ದರ್ಶನ್ ಅಭಿಮಾನಿ ಹೆಸರಿನ ಈ ಪೋಸ್ಟ್ ನೋಡಿದ ಹಲವರು ತೀವ್ರವಾಗಿ ಖಂಡಿಸಿದ್ದಾರೆ. ದರ್ಶನ್ ಮೊದಲು ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಎಂದಿದ್ದಾರೆ. ಇನ್ನು ಕೆಲವರು ಇಷ್ಟು ಕೀಳುಮಟ್ಟಕ್ಕೆ ಆರೋಪಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಇದು ನಕಲಿ ಟ್ವೀಟ್ ಖಾತೆಯಿಂದ ಬಂದಿರುವ ಪೋಸ್ಟ್ ಇರಬಹುದು ಎಂದು ಕೆಲವರು ಶಂಕಿಸಿದ್ದಾರೆ. ಅದೇನೇ ಇರಲಿ ಆದರೆ ಕೀಳಾಗಿ, ಅವಾಚ್ಯವಾಗಿ ಆರೋಪ ಮಾಡಿರುವ ಟ್ವೀಟ್ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಬೇಕು ಎಂದು ಅಪ್ಪು ಅಭಿಮಾನಿಗಳು ಕಮಿಷ್ನರ್ ಗೆ ದೂರು ನೀಡಲು ಹಾಗೂ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.


Related Articles

Back to top button