ಗಣೇಶ ಪೆಂಡಾಲ್ ನಿರ್ಮಿಸುವ ಮುನ್ನ ಇದನ್ನು ಓದಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇದೇ ಸೆಪ್ಟಂಬರ್ 2ರಿಂದ ಆರಂಭವಾಗಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಕೆಲವು ಎಚ್ಚರಿಕೆಗಳನ್ನು ನೀಡಿದೆ.
ಗಣೇಶ ಪೆಂಡಾಲ್ ನಿರ್ಮಿಸುವಾಗ ಅವಘಡಗಳು ಉಂಟಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಕೆಲವು ಸೂಚನೆಗಳನ್ನು ಪಾಲಿಸಬೇಕು ಎಂದು ಸೂಚಿಸಿದೆ.
- ಪೆಂಡಾಲ್ ಮೇಲೆ ವಿದ್ಯುತ್ ಪ್ರವಾಹ ತಂತಿಗಳು ಬಾರದಂತೆ ನೋಡಿಕೊಳ್ಳಬೇಕು. ಮತ್ತು ಟಿಸಿಗಳ ಅಕ್ಕಪಕ್ಕ ಪೆಂಡಾಲ್ ನಿರ್ಮಾಣ ಮಾಡಬಾರದು.
- ಪೆಂಡಾಲ್ ನಿರ್ಮಾಣಕ್ಕೆ ಬಳಸುವ ವಸ್ತುಗಳು ದಹನಶೀಲವಲ್ಲದಂತೆ ನೋಡಿಕೊಳ್ಳಬೇಕು.
- ಅಲಂಕಾರಿಕ ವಿದ್ಯುತ್ ಲೈಟಿಂಗ್ ಮಾಡುವಾಗ ಉತ್ತಮ ಗುಣಮಟ್ಟದ ಲೈಟಿಂಗ್ ಸರಗಳನ್ನು ಬಳಸಬೇಕು.
- ರಸ್ತೆಯ ಮೇಲೆ ಪೆಂಡಾಲ್ ನಿರ್ಮುಸುವಾಗ ಅಗ್ನಿಶಾಮಕ ವಾಹನ ಓಡಾಡುವಂತೆ 12-14 ಅಡಿ ರಸ್ತೆಯನ್ನು ಬಿಡಬೇಕು.
- ಪೆಂಡಾಲ್ ಹತ್ತಿರ ಎಲ್ಲ ತುರ್ತು ಸೇವಾ ಇಲಾಖೆಗಳ ದೂರವಾಣಿ ಸಂಖ್ಯೆಗಳನ್ನೊಳಗೊಂಡ ಫಲಕವನ್ನು ಹಾಕಬೇಕು.
- ಪೆಂಡಾಲ್ ಗಳಲ್ಲಿ ಸೀಮೆ ಎಣ್ಣೆ, ಪೆಟ್ರೋಲ್, ಡಿಸೆಲ್, ಸಿಡಿಮದ್ದುಗಳಂತಹ ದಹನಶೀಲ ವಸ್ತುಗಳನ್ನು ಶೇಖರಿಸಿಡಬಾರದು.
- ಪೆಂಡಾಲ್ ಹತ್ತಿರ 500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇಡಬೇಕು.
- ಪೆಂಡಾಲ್ ಹತ್ತಿರ ಮರಳು ತುಂಬಿದ 2-3 ಬಕೆಟ್ ಇಡಬೇಕು.
- ರಾತ್ರಿ ವೇಳೆಯಲ್ಲಿ ಮಂಟಪಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಪಹರೆಗಾರರನ್ನು ನೇಮಿಸಬೇಕು.
- ವಿದ್ಯುತ್ ಜೋಡಣೆ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಇನ್ಸುಲೇಷನ್ ಬಳಸಬೇಕು. ಉತ್ತಮ ಗುಣಮಟ್ಟದ ವಿದ್ಯುತ್ ಪಿನ್ ಬಳಸಬೇಕು. ವಿದ್ಯುತ್ ತಂತಿಗಳನ್ನು ನೇರವಾಗಿ ಪ್ಲಗ್ ಗೆ ಜೋಡಿಸಬಾರದು.
- ಹೈ ಪವರ್ ಹಾಲೋಜಿನ್ ಬಲ್ಬ್ ಗಳನ್ನು ಬಳಸಬೇಡಿ.
- ವಿದ್ಯುತ್ ತಂತಿಗಳನ್ನು ಕಾರ್ಪೆಟ್ ಕೆಳಗಡೆ ಹಾದುಹೋಗದಂತೆ ನೋಡಿಕೊಳ್ಳಬೇಕು.
- ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಿ.ಎಸ್.ಠಕ್ಕೇಕರ್ ಅವರನ್ನು (ಫೋನ್ – 9449735211) ಸಂಪರ್ಕಿಸಬೇಕು ಎಂದು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ