ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾನೇ ನಿಲ್ಲೋದಾದ್ರೂ ರೆಡಿ, ಬೇರೆಯವರು ನಿಂತರೂ ಕೆಲಸ ಮಾಡಲು ರೆಡಿ. ಹೈಕಮಾಂಡ್ ಆದೇಶದಂತೆ ನಡೆಯುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು, ಹೈಕಮಾಂಡ್ ಗೆ ನನ್ನ ಹೆಸರನ್ನು ಕಳಿಸಿರುವುದು ನಿಜ. ಹಾಗೆಯೇ ಬೇರೆಯವರ ಹೆಸರನ್ನೂ ಕಳಿಸಲಾಗಿದೆ. ಯಾರಿಗೆ ಕೊಟ್ಟರೆ ಅನುಕೂಲ ಎನ್ನುವ ಕುರಿತೂ ಚರ್ಚೆಯಾಗಿದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿ ರೇಸ್ ನಲ್ಲಿ ಸಧ್ಯ ನಾನಿಲ್ಲ ಎನ್ನುವುದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ದೆಹಲಿಗೆ ಬರುವಂತೆ ಹೈಕಮಾಂಡ್ ನಿಂದ ಸಂದೇಶ ಬಂದಿದೆ. ಹೋಗಿ ಮಾತನಾಡುತ್ತೇನೆ. ಎಲ್ಲ ವಿಚಾರ ತಿಳಿಸುತ್ತೇನೆ. ಅವರು ಹೇಳಿದಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪಕ್ಷದ ಆಧಾರದ ಮೇಲೆ ಚುನಾವಣೆ ಮಾಡುತ್ತೇವೆ. ಜಾತಿ ಆಧಾರದ ಮೇಲೆ ಅಲ್ಲ. ಎಲ್ಲ ಕಡೆ ಒಳ್ಳೆಯ ವಾತಾವರಣ ಇದೆ ಎಂದ ಅವರು, ನಾನು ಮಂತ್ರಿಯಾಗುವುದಕ್ಕೋಸ್ಕರ್ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ. ಈಗ ಅಂತಹ ಪ್ರಶ್ನೆಯೂ ಇಲ್ಲ. ಪಕ್ಷದ ಆದೇಶದಂತೆ ನಡೆಯುತ್ತೇನೆ ಎಂದು ಹೇಳಿದರು.
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಅಂತಿಮ: ಅಧಿಕೃತ ಘೋಷಣೆಯಷ್ಟೆ ಬಾಕಿ
ಸತೀಶ್ ಜಾರಕಿಹೊಳಿ V/S ಶೃದ್ಧಾ ಶೆಟ್ಟರ್ ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ