Latest

ಮಹದಾಯಿ ಹೋರಾಟಕ್ಕಾಗಿ ಜೈಲಿಗೆ ಹೋಗಲೂ ಸಿದ್ದರಾಗೋಣ

ಪ್ರಗತಿವಾಹಿನಿ ಸುದ್ದಿ, ಪಣಜಿ(ಮಾಪ್ಸಾ): ಮಹದಾಯಿ ನದಿ ನೀರು ಉಳಿವಿಗಾಗಿ ನಾವೆಲ್ಲರೂ ಒಂದೇ ವೇದಿಕೆಗೆ ಬಂದು ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಮಹದಾಯಿ ಉಳಿಗಾಗಿ ಹೋರಾಟ ನಡೆಸುವ ಸಂದರ್ಭದಲ್ಲಿ ಜೈಲಿಗೆ ಹೋಗುವ ಸಂದರ್ಭ ಬಂದರೂ ಕೂಡ ಅದಕ್ಕೆ ಜನತೆ ಮಾನಸಿಕವಾಗಿ ಸಿದ್ಧವಾಗಿರಬೇಕು ಎಂದು ಮಹದಾಯಿ ಹೋರಾಟಗಾರ ಮತ್ತು ಗೋವಾ ಸುರಕ್ಷಾ ಮಂಚ್ ಪಕ್ಷದ ಪ್ರಮುಖ ಸುಭಾಷ್ ವೇಲಿಂಗ್‌ಕರ್ ಗೋವಾ ರಾಜ್ಯದ ಜನತೆಗೆ ಕರೆ ನೀಡಿದರು.

ಮಹದಾಯಿ ಬಚಾವ್ ಆಂದೋಲನದ ವತಿಯಿಂದ ಸೋಮವಾರದಿಂದ ರಾಜ್ಯಾದ್ಯಂತ ಮಹದಾಯಿ ಆಂದೋಲನ ಮತ್ತು ಮಹದಾಯಿ ಜನಜಾಗೃತಿ ಹೋರಾಟ ಪುನರಾರಂಭಗೊಂಡಿದೆ.

ಸೋಮವಾರ ಸಂಜೆ ಮಾಪ್ಸಾದ ಹುತಾತ್ಮ ಸ್ಮಾರಕದ ಬಳಿ ಹೋರಾಟಗಾರರಾದ ಅರವಿಂದ ಭಾಟೀಕರ್, ಎಲ್ವಿಸ್ ಗೋಮ್ಸ, ಸುಭಾಷ ವೇಲಿಂಗ್‌ಕರ್ ಮತ್ತಿತರರ ಉಪಸ್ಥಿತಿಯಲ್ಲಿ ಈ ಹೋರಾಟಕ್ಕೆ ಚಾಲನೆ ದೊರೆಯಿತು. ಡಿಸೆಂಬರ್ ೯ ರ ವರೆಗೆ ಗೋವಾದ ೧೨ ತಾಲೂಕಿನಲ್ಲಿ ಆಂದೋಲನ ಮತ್ತು ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.

ರಾಜ್ಯದ ಹಿತವನ್ನು ಸರ್ಕಾರ ಕಾಪಾಡಲು ಮುಂದಾಗದಿದ್ದರೆ ಯಾವುದೇ ಮಂತ್ರಿಗಳಿಗೆ ಅವರು ಮನೆಗೂ ತೆರಳಲು ಬಿಡದೆ ಮಾರ್ಗಮಧ್ಯದಲ್ಲಿಯೇ ಅಡ್ಡಗಟ್ಟಿ ನಿಲ್ಲಿಸಬೇಕು. ಮಹದಾಯಿ ನದಿ ನೀರನ್ನು ಉಳಿಸಿಕೊಳ್ಳಲು ಯಾವುದೇ ಹೋರಾಟಕ್ಕೂ ರಾಜ್ಯದ ಜನ ಸಿದ್ಧರಾಗಬೇಕು ಎಂದು ಸುಭಾಷ್ ವೇಲಿಂಗ್‌ಕರ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಪ್ಸಾ ನಗರದಲ್ಲಿ ಮಹದಾಯಿ ಜನಜಾಗೃತಿ ಬೃಹತ್ ಮೆರವಣಿಗೆ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಹದಾಯಿ ಬಚಾವ್ ಆಂದೋಲನಕ್ಕೆ ಬಾರ್ದೇಸ್ ತಾಲೂಕಿನ ೩೬ ಪ್ರಮುಖ ಸಂಸ್ಥೆಗಳು ಬೆಂಬಲ ನೀಡಿವೆ. ಅಂತೆಯೇ ಇತರ ಹಲವು ಸಂಘಟನೆಗಳು ಕೂಡ ಹೋರಾಟಕ್ಕೆ ಬೆಂಬಲಿಸಿವೆ. ಡಿಸೆಂಬರ್ ೯ ರಂದು ಗೋವಾ ರಾಜಧಾನಿ ಪಣಜಿಯಲ್ಲಿ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಯಲಿದೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮಹದಾಯಿ ಹೋರಾಟದ ಬಿಸಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button