ಪ್ರಗತಿವಾಹಿನಿ ಸುದ್ದಿ, ನವದೆಹಲಿ – ತಮ್ಮ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್‌ಗೆ ಸೂಚನೆ ನೀಡುವಂತೆ ಕೋರಿ 15 ಶಾಸಕರು ಹೂಡಿರುವ ಅರ್ಜಿಯ ವಿಚಾರಣೆ ಸರ್ವೋಚ್ಛ ನ್ಯಾಯಾಲಯ ದಲ್ಲಿ ನಡೆಯುತ್ತಿದೆ.
ಜೊತೆಗೆ, ಸ್ಪೀಕರ್ ರಮೇಶ್ ಕುಮಾರ್ ಅವರು, ತಮಗೆ ಸಮಯಾವಕಾಶಬೇಕು. ಇದರಲ್ಲಿ ಸುಪ್ರಿಂ ಕೋರ್ಟ್ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ. ರಾಜೀನಾಮೆ ಅಂಗೀಕಾರ ವಿಚಾರವನ್ನು ಸ್ಪೀಕರ್ ವಿವೇಚನೆಗೆ ಬಿಡುವಂತೆ ರಮೇಶ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಶುಕ್ರವಾರ ನಡೆದಿದ್ದ ವಿಚಾರಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರಿಕೋರ್ಟ್ ಆದೇಶಿಸಿ, ಈಗ ವಿಚಾರಣೆ ಕೈಗೆತ್ತಿಕೊಂಡಿದೆ.
ಶಾಸಕರ ಪರವಾಗಿ ಮುಖುಲ್ ರೋಹಟಗಿ ಕಳೆದ ಸುಮಾರ ಒಂದು ಗಂಟೆಯಿಂದ ತಮ್ಮ ವಾದ ಮಂಡಿಸುತ್ತಿದ್ದು, ಅದಕ್ಕೆ ನ್ಯಾಯಮೂರ್ತಿಗಳು ಕೆಲವು ಸ್ಪಷ್ಠೀಕರಣ ಕೇಳುತ್ತಿದ್ದಾರೆ. ಇದಾದ ನಂತರ ಸ್ಪೀಕರ್ ಪರ ವಕೀಲರು ವಾದ ಮಂಡಿಸಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ