Kannada NewsKarnataka NewsLatest

*ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ: ಇಬ್ಬರು ಹಿಂದು ಕಾರ್ಯಕರ್ತರ ಬಂಧನ*

ಪ್ರಗತಿವಾಹಿನಿ ಸುದ್ದಿ : ಬಾಗಲಕೋಟೆ ನಗರದಲ್ಲಿ ಶಿವಾಜಿ ಮಹಾರಾಜರ ಮೆರವಣಿಗೆ ವೇಳೆ ಸಂಭವಿಸಿದ್ದ ಕಲ್ಲು ತೂರಾಟ ಹಾಗೂ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರು ಹಿಂದು ಕಾರ್ಯಕರ್ತರ ಬಂಧನವಾಗಿದೆ.

ಮಟನ್ ಮಾರುಕಟ್ಟೆಯ ವ್ಯಾಪ್ತಿ ಕಲ್ಲು ಎಸೆದ ಹಿನ್ನೆಲೆ ಇಬ್ಬರು ಹಿಂದೂ ಕಾರ್ಯಕರ್ತರ ಮೇಲೆ FIR ದಾಖಲಾಗಿದ್ದು, ಬಾಗಲಕೋಟೆ ನಗರ ಠಾಣೆ ಪೊಲೀಸರಿಂದ ಬಂಧಿಸಲಾಗಿದೆ.

Home add -Advt

ಅಶೋಕ್ ಬಾರಕೇರ (22) ಮತ್ತು ಸಂದೀಪ ಫೆರಡೆ (38) ಬಂಧಿತರು ಎಂದು ಗುರುತಿಸಲಾಗಿದೆ.ಗಲಭೆ ಎಬ್ಬಿಸುವ ಉದ್ದೇಶ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಖಾಸಗಿ ಆಸ್ತಿಗಳ ಮೇಲೆ ಕಲ್ಲು ತೂರಾಟ ಹಿನ್ನೆಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಕಲ್ಲು ಎಸೆಯುವ ವಿಡಿಯೋ, ಫೋಟೋ ಸಾಕ್ಷಿ ಆಧರಿಸಿ ಬಂಧಿಸಿರುವ ಪೊಲೀಸರು ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ನಿರ್ಬಂಧ ಹೇರಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಸಮಾಜದಲ್ಲಿ ಅಶಾಂತಿ ಹರಡಬಾರದೆಂಬ ಮುನ್ನೆಚ್ಚರಿಕೆಯಿಂದ ಕ್ರಮ ಜರುಗಿಸಲಾಗಿದೆ.

Related Articles

Back to top button