
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಜ್ವರಬಾಧೆಗೆ ತುತ್ತಾದ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರರಲ್ಲಿ ಬಹುತೇಕ ಜನ ಚೇತರಿಸಿಕೊಂಡಿದ್ದಾರೆ.
ಇವರೆಲ್ಲ ವೈರಲ್ ಜ್ವರ ಬಾಧೆಗೆ ಒಳಗಾಗಿದ್ದಾಗಿದ್ದು, ಇನ್ನು ಕೆಲವರು ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಪಿಸಿಬಿಯ ಮಾಧ್ಯಮ ವ್ಯವಸ್ಥಾಪಕ ಅಹ್ಸಾನ್ ಇಫ್ತಿಕಾರ್ ನಾಗಿ ತಿಳಿಸಿದ್ದಾರೆ.
ಅಕ್ಟೋಬರ್ 20 ರಂದು ನಡೆಯಲಿರುವ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಹಿಂದಿನ ದಿನ ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಏಳು ವಿಕೆಟ್‌ಗಳ ಸೋಲಿನ ನಂತರ ಪಾಕಿಸ್ತಾನ ತಂಡ ಭಾನುವಾರ ಬೆಂಗಳೂರಿಗೆ ಆಗಮಿಸಿತ್ತು.