National

*ಮತ್ತೋರ್ವ ಭಯೋತ್ಪಾದಕನ ಮನೆ ಬಾಂಬ್ ಸ್ಫೋಟಿಸಿ ಧ್ವಂಸ: ಜಮ್ಮು-ಕಾಶ್ಮೀರದಲ್ಲಿ ಸಾಲು ಸಾಲು ಉಗ್ರರ ಮನೆಗಳು ನೆಲಸಮ*

ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಲಿ ಬೆನ್ನಲ್ಲೇ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚಾರಣೆ ಚುರುಕುಗೊಳಿಸಿದ್ದು, ಜಮ್ಮು-ಕಾಶ್ಮೀರದಲ್ಲಿ ಉಗ್ರರು ಹೊಂದಿರುವ ಮನೆಗಳನ್ನು ಹಂತ ಹಂತವವಾಗಿ ಧ್ವಂಸ ಮಾಅಡುತ್ತಿದೆ.

ಈಗಾಗಲೇ 6 ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಇದೀಗ ಮತ್ತೋರ್ವ ಉಗ್ರನ ಮನೆಯನ್ನು ಬಾಂಬ್ ದಾಳಿ ನಡೆಸಿ ಅಧಿಕಾರಿಗಳು ಧ್ವಂಸ ಮಾಡಿದ್ದಾರೆ.

Home add -Advt

ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಾಲಾರೂಸ್ ಪ್ರದೇಶದಲ್ಲಿದ್ದ ಭಯೋತ್ಪಾದಕ ಫಾರೂಕ್ ಅಹ್ಮದ್ ತಡ್ವಾ ನಿವಾಸದ ಮೇಲೆ ಅಧಿಕಾರಿಗಳು ಬಾಂಬ್ ದಾಳಿ ನಡೆಸಿದ್ದಾರೆ. ಏಕಾಏಕಿ ಮನೆ ಸ್ಫೋಟಗೊಂಡಿದ್ದು, ಸಂಪೂರ್ಣ ನಾಶವಾಗಿದೆ.

ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಇದೇ ರೀತಿ ಕ್ರಮ ಕೈಗೊಳ್ಳಲಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Related Articles

Back to top button