ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ರೈಲ್ವೆ ಸಚಿವಾಲಯ ಯುಪಿಎಸ್ ಸಿ ಮತ್ತು DoPT ಯೊಂದಿಗೆ ಸಮಾಲೋಚಿಸಿ ಭಾರತೀಯ ರೈಲ್ವೆ ನಿರ್ವಹಣಾ ಸೇವೆಯ (ಐಆರ್‌ಎಂಎಸ್) ನೇಮಕಾತಿಯನ್ನು 2023ನೇ ವರ್ಷದಿಂದ ಯುಪಿಎಸ್‌ಸಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಪರೀಕ್ಷೆಯ ಮೂಲಕ ಮಾಡಲು ನಿರ್ಧರಿಸಿದೆ.
ಐಆರ್‌ಎಂಎಸ್ ಎರಡು ಹಂತದ ಪರೀಕ್ಷೆಯಾಗಿರುತ್ತದೆ. ಪ್ರಾಥಮಿಕ ಸ್ಕ್ರೀನಿಂಗ್ ಪರೀಕ್ಷೆಯ ನಂತರ ಮುಖ್ಯ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ.
ಎರಡನೇ ಹಂತದ ಪರೀಕ್ಷೆ ಬರೆಯಲು (ಐಆರ್‌ಎಂಎಸ್ ಮುಖ್ಯ ಲಿಖಿತ ಪರೀಕ್ಷೆ) ಎಲ್ಲ ಅರ್ಹ ಅಭ್ಯರ್ಥಿಗಳು ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆಯನ್ನು ಬರೆಯುವ ಅಗತ್ಯವಿದೆ. ಸೂಕ್ತ ಸಂಖ್ಯೆಯ ಅಭ್ಯರ್ಥಿಗಳನ್ನು ಐಆರ್‌ಎಂಎಸ್ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
ಐಆರ್‌ಎಂಎಸ್ ಮುಖ್ಯ ಪರೀಕ್ಷೆಯು ಈ ಕೆಳಗೆ ಸೂಚಿಸಲಾದ ವಿಷಯಗಳಲ್ಲಿ ಸಾಂಪ್ರದಾಯಿಕ ಪ್ರಬಂಧ ಪ್ರಕಾರದ 4 ಪೇಪರ್‌ಗಳನ್ನು ಒಳಗೊಂಡಿರುತ್ತದೆ:
*ಅರ್ಹತಾ ಪತ್ರಿಕೆಗಳು
*ಪೇಪರ್ ಎ- ಸಂವಿಧಾನದ ಎಂಟನೇ ಶೆಡ್ಯೂಲ್ ಒಳಗೊಂಡಿರುವ ಭಾರತೀಯ ಭಾಷೆಗಳ ಪೈಕಿ ಒಂದನ್ನು ಅಭ್ಯರ್ಥಿಯು ಆಯ್ಕೆಮಾಡಿಕೊಳ್ಳಬೇಕು. – 300 ಅಂಕಗಳು
*ಪೇಪರ್ ಬಿ-ಇಂಗ್ಲೀಷ್ – 300 ಅಂಕಗಳು
(ii) ಮೆರಿಟ್‌ಗಾಗಿ ಪರಿಗಣಿಸಲಾಗುವ ಪತ್ರಿಕೆಗಳು
ಐಚ್ಧಿಕ ವಿಷಯ – ಪೇಪರ್ 1 – 250 ಅಂಕಗಳು
ಐಚ್ಛಿಕ ವಿಷಯ – ಪೇಪರ್ 2 – 250 ಅಂಕಗಳು
(iii) ವ್ಯಕ್ತಿತ್ವಪರೀಕ್ಷೆ – 100 ಅಂಕಗಳು
ಬೆಳಗಾವಿ: ಒಡಹುಟ್ಟಿದ ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಬಂದು ಶರಣಾದ ತಮ್ಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ